ಹಿರೇಮಠ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳಲು – ಹಾನಗಲ್ ಕುಮಾರ ಸ್ವಾಮಿಜಿ ಯಿಂದ ಕರೆ.
ನರೇಗಲ್ ನ.18

ಹಾನಗಲ್ ಕುಮಾರ ಸ್ವಾಮಿಗಳ ಜೀವನ ಚರಿತ್ರೆ ತಿಳಿಯುವುದೆಂದರೆ ವೀರಶೈವ ಸಮಾಜದ ಇತಿಹಾಸವನ್ನೇ ತಿಳಿದಂತೆ ಎಂದು ನಿಡಗುಂದಿ ಕೊಪ್ಪದ ಶ್ರೀ ಚನ್ನಬಸವ ಮಹಾ ಸ್ವಾಮಿಗಳವರು ಹೇಳಿದರು. ಅವರು ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪುರಾಣ ಆಲಿಕೆಯಿಂದ ಪಾಪಗಳು ದೂರಾಗುತ್ತವೆ. ಪುರಾಣ ಕೇಳಿ ನೀವು ಆಚಾರ, ವಿಚಾರಗಳಿಂದ ಬದುಕು ಸಾಗಿಸಿದರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ. ಜಾತ್ರೋತ್ಸವ ನಿಮಿತ್ತ ಹಿರೇಮಠದ ಶ್ರೀಗಳು ಕೈಗೊಳ್ಳಲು ಉದ್ದೇಶಿಸಿರುವ ಧರ್ಮ ಜಾಗೃತಿ ಪಾದಯಾತ್ರೆ ಊರಿನಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಲಿದೆ. ಆದ್ದರಿಂದ ನೀವುಗಳೆಲ್ಲರೂ ಪಾದ ಯಾತ್ರೆಯಲ್ಲಿ ಪಾಲ್ಗೊಂಡು ನಿಮ್ಮ ಜನ್ಮವನ್ನು ಸಾರ್ಥಕ ಮಾಡಿ ಕೊಳ್ಳಿ ಎಂದರು. ಶ್ರೀಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿ. ಪುರಾಣ, ಪ್ರವಚನ ಕೇಳುವುದರಿಂದ ಮನುಷ್ಯನಲ್ಲಿ ಸದ್ಗುಣಗಳು ಬೆಳೆಯುತ್ತವೆ. ಜೀವನದ ಮೌಲ್ಯಗಳನ್ನು ಅರಿಯಲು ಇವು ಸಹಾಯಕವಾಗುತ್ತವೆ. ಕುಮಾರೇಶನ ಪುರಾಣ ಕೇಳುವುದರಿಂದ ವ್ಯಕ್ತಿ ಸುಧಾರಣೆ ಮತ್ತು ಸಮಾಜ ಸುಧಾರಣೆಯಾಗುತ್ತದೆ. ನಾಳೆಯಿಂದ ಬೆಳಿಗ್ಗೆ ಪ್ರಾರಂಭವಾಗುವ ಧರ್ಮ ಜಾಗೃತಿ ಪಾದ ಯಾತ್ರೆಯಲ್ಲಿ ನೀವುಗಳೆಲ್ಲ ಪಾಲ್ಗೊಳ್ಳ ಬೇಕೆಂದು ಶ್ರೀಗಳು ತಿಳಿಸಿದರು. ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯಿಂದ ಶ್ರೀಮಠದ ಸೇವೆ ಏನೇ ಇದ್ದರೂ ಮಾಡಿ ಕೊಡುವುದಾಗಿ ಹೇಳಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ ಉಪಸ್ಥಿತರಿದ್ದರು. ಈಶ್ವರ ಬೆಟಗೇರಿ ಸ್ವಾಗತಿಸಿ, ನಿರೂಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ