ಬ್ಲಾಕ್ ಮೇಲ್ ಮಾಡುವ ನಕಲಿ ನಾಯಕರ ಬಗ್ಗೆ ಆತಂಕ ಬೇಡ….!
ದೇವರ ಹಿಪ್ಪರಗಿ ಏಪ್ರಿಲ್.22

ಅಧಿಕಾರಿ ವರ್ಗಕ್ಕೆ ಸುಮ ಸುಮ್ನೆ ಕ್ರಿಮಿನಲ್ ಪ್ರಕರಣಗಳು ದಾಖಲೆ ಮಾಡುತ್ತೇವೆ. ನಿಮ್ಮ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಗೊಡ್ಡು ಬೆದರಿಕೆ ಹಾಕುವ, ವಿವಿಧ ಕಡೆ ಸುಳ್ಳು ಆರೋಪ ಮಾಡುವ ಕೆಟ್ಟ ಕುತಂತ್ರ ಬುದ್ಧಿ ಶಕ್ತಿಯ ನಾಯಕರಿಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತ ರಕ್ಷಣೆ ಸಮಿತಿಯ ತಾಲೂಕು ಅಧಕ್ಷ ವಿಜಯ ಸಾಲವಾಡಗಿ. ಹೇಳಿದರು.ಪಟ್ಟಣದ ಖಾಸಗಿ ಹೊಟೆಲ್ ಯೊಂದರಲ್ಲಿ ಸುದ್ದಿ ಗೋಷ್ಠಿ ಆಯೋಜಿಸಿದ್ದ ತಳವಾರ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.ತಳವಾರ ಮತ್ತು ಪರಿವಾರ ಜಾತಿಯ ಪದಗಳು, ನಾಯಕ/ನಾಯ್ಕೊಡಿ ಜಾತಿ ಪದಗಳಿಂದ ಬಿಟ್ಟು ಹೋದ ಪದಗಳು, ಸಮಾನಾರ್ಥಕ ಪದಗಳು ಎಂದು ರಾಜ್ಯ ಮತ್ತು ಕೇಂದ್ರ ಸರಕಾರ ತಿದ್ದುಪಡಿ ಮಾಡಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಗೊಳಿಸಿ ಅಧಿಕೃತವಾಗಿ ಗೆಜೆಟ್ ಹೊರಡಿಸುವ ಮೂಲಕ ಈ ಸಮುದಾಯದಗಳಿನೆ ನ್ಯಾಯ ಒದಗಿಸುವ ಕಾರ್ಯ ಮಾಡಿವೆ. ಆದರೆ ಇತ್ತೀಚಿಗೆ ನಕಲಿ ಜಾತಿ ತಡೆ ಹಿಡಿಯುವ ಎಂದು ನಕಲಿ ಸಂಘಟನೆ ಕಟ್ಟಿಕೊಂಡು, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿ ಆರ್ ಸೆಲ್ ಇಲಾಖೆಯಲ್ಲಿ ಸುಖಾ ದೂರು ಕೂಡುತ್ತಾ ಅಧಿಕಾರಿ ವರ್ಗಕ್ಕೆ ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿ ವರ್ಗ ಯಾವುದೇ ಕಾರಣಕ್ಕೂ ಸುಳ್ಳು ಆರೋಪಗಳಿಗೆ ಮನ್ನಣೆ ಮಾಡದೆ, ಸರಕಾರದ ಮಾರ್ಗ ಸೂಚಿಯಂತೆ ಕಾನೂನು ಚೌಕಟ್ಟಲ್ಲಿ ಜಾತಿ ಪ್ರಮಾಣ ವಿತರಿಸುವ ಮತ್ತು ಪರಿಶೀಲಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ನಕಲಿ ಪ್ರಮಾಣ ಪತ್ರ ವಿತರಣೆಯಾದಲ್ಲಿ ನಾವು ಸಹ ಕಾನೂನು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಾವುತ ಮೇಟಗಾರ, ರಾಜು ಮಣ್ಣೂರ, ಚಂದು ಅಲ್ಲಾಪುರ, ಮುದಕಪ್ಪ ಡೋಣುರ, ರಮೇಶ್ ಕೋರಿ, ಮಲ್ಲು ಉತ್ನಾಳ, ಶಿವಶರಣರ ನಾಟೀಕಾರ, ರೇವಣ್ಣ ಹತ್ತಳ್ಳಿ, ಚಂದು ತಳವಾರ, ಶಂಕರ್ ಜಮಾದಾರ ಇನ್ನೂ ಅನೇಕ ಯುವಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.