ಆಕಾಶವಾಣಿಯ ಚಿಗುರು ಕಾರ್ಯಕ್ರಮದಲ್ಲಿ ಭಾಗವಹಿಸಿ – ಸಂಭ್ರಮಿಸಿದ ಕುಂಚಿಗನಾಳ್ ಮಕ್ಕಳು.
ಕುಂಚಿಗನಾಳ್ ಆ.08

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಲ್ಲಿನ ಕೋಟೆ ಪ್ರಸಿದ್ಧಿಯ ಚಿತ್ರದುರ್ಗ ಆಕಾಶವಾಣಿಯ ಜನಪ್ರಿಯ ಮಕ್ಕಳ ಕಾರ್ಯಕ್ರಮ “ಚಿಗುರು” ದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಭಾಷಣ, ದೇಶ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ಪರಿಸರ ಗೀತೆ, ಮಿಮಿಕ್ರಿ, ಗಾದೆ ಮಾತು, ಒಗಟು, ಕನ್ನಡ ಮತ್ತು ಇಂಗ್ಲೀಷ್ ಪದ್ಯಗಳನ್ನು ಹೇಳುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ವೀರ ಮಂಜುಳಾ ದೇವಿ ದೈಹಿಕ ಶಿಕ್ಷಕಿ ಇಂದ್ರಮ್ಮ ಹೆಚ್. ಸಹ ಶಿಕ್ಷಕರಾದ ತ್ರಿವೇಣಿ, ಮಂಜುಳಾ, ಶಾರದಾ, ಅತಿಥಿ ಶಿಕ್ಷಕರಾದ ಕವಿತಾ, ಶಶಿಕಲಾ ಸೇರಿದಂತೆ ಆಕಾಶವಾಣಿಯ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

