ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ – ಬೃಹತ್ ಪ್ರತಿಭಟನೆ.
ಬಾಗಲಕೋಟೆ ಅ.17

ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಪರಿಶಿಷ್ಟರ ಒಳ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅದರ ಪ್ರಕಾರ ರಾಜ್ಯ ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ತೀರ್ಪನ್ನು ಆಚರಿಸಿ ಒಳ ಮೀಸಲಾತಿಯನ್ನು ಜಾರಿಗೆ ತರಬೇಕಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಮಾಡುತ್ತಿಲ್ಲ. ನ್ಯಾಯಮೂರ್ತಿ ನಾಗಮೋಹವದಾಸ್ ಆಯೋಗದ ವರದಿಯಂತೆ ಉಪ ವರ್ಗೀಕರಣದ ಸೂತ್ರವನ್ನು ರೂಪಿಸಲಾಗಿದೆ. ಆಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಒಳ ಮೀಸಲಾತಿ ವರ್ಗೀಕರಣ ಕುರಿತು ವರದಿಯನ್ನು ನೀಡಿರುತ್ತದೆ.

ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳದೇ ವಿಳಂಬ ಧೋರಣೆ ಕೈಗೊಳ್ಳದೇ ವಿಳಂಬ ಧೋರಣೆ ಅನುಸರಿಸುತಿದ್ದಾರೆ. ಅಷ್ಟೇ ಅಲ್ಲ ಒಳ ಮೀಸಲು ಹೋರಾಟದ ದಿಕ್ಕು ತಪ್ಪಿಸಲು ಜಾತಿ ಜನಗಣತಿ ವರದಿ ಬಿಡುಗಡೆಯ ಕುರಿತ ವಿಚಾರಗಳನ್ನು ತೇಲಿಬಿಟ್ಟಿದ್ದಾರೆ.ಇದನ್ನು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ತಕ್ಷಣವೇ ಒಳ ಮೀಸಲು ನೀತಿಯನ್ನು ಜಾರಿಗೆ ತರಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲ್ಲಪ್ಪ. ಬೆಂಡಿಗೇರಿ, ವಹಿಸಿ ಕೊಂಡಿದ್ದರು. ರಾಜ್ಯ ಮಹಾಸಭಾದ ಉಪಾಧ್ಯಕ್ಷರಾದ ಎಮ್.ಯು ಮೂಗನೂರ, ಮುತ್ತಣ್ಣ.ಬೆಣ್ಣೂರ, ಶಿವಾನಂದ.ಟವಳಿ, ಫೀರಪ್ಪ. ಮ್ಯಾಗೇರಿ, ಶಿವಾನಂದ.ಮಾದರ, ಮುತ್ತು.ಚೂರಿ, ಮುಂತಾದ ಪ್ರಮುಖರು ಸೇರಿ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎಂ ಜಾನಕಿ ಯವರಿಗೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅನುಷ್ಠಾನ ಗೊಳಿಸಲು ಇವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನೂರ.ಸಿ.ಹಲಗಿ.ಬಾಗಲಕೋಟೆ