ಜಗತ್ತು ಕಂಡ ಮೊಟ್ಟ ಮೊದಲ ಕವಿ ವಾಲ್ಮೀಕಿ ಅವರ ಕಾವ್ಯ – ಆದಿ ಕಾವ್ಯ ಶ್ರೀ ರಾಮಾಯಣ.
ಕೂಡ್ಲಿಗಿ ಅ.17

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ಬರುವ ವೈ.ಎಸ್.ಎಸ್ ಸಮೂಹ ಸಂಸ್ಥೆ ಮತ್ತು ಜ್ಞಾನ ಮಂದಿರ ಸಂಸ್ಥೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ಜಿ.ಆರ್ ರಾಜು ಆಡಳಿತ ವಹಿಸಿಕೊಂಡು ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಮಾತನಾಡುತ್ತಾ ಮನುಷ್ಯನಲ್ಲಿ ಸಂಸ್ಕಾರ ಮತ್ತು ಸಾತ್ವಿಕತೆ ಇರಬೇಕು ಇವು ಇಲ್ಲವರೇ ಮನುಷ್ಯ ಭೂಮಿಯ ಮೇಲೆ ಉಳಿಯಲಿಕ್ಕೆ ಸಾಧ್ಯವಿಲ್ಲ ರಾಮಾಯಣ ಎಂಬ ಕಾವ್ಯ ಲೋಕ ಕಲ್ಯಾಣಕ್ಕೆ ನಾಂದಿ ಹಾಗಿದೆ ಪ್ರತಿಯೊಬ್ಬ ಮನುಷ್ಯ ಅಹಂಕಾರ ಹುಂಬತನ ಹಂಬಲವನ್ನು ಬಿಟ್ಟು ಸಮಾಜದಲ್ಲಿ ಒಳ್ಳೆಯ ತನದಿಂದ ಸಾಗಬೇಕು ಎಂದು ತಿಳಿಸಿದರು.

ಹಾಗೆ ವೇದಿಕೆಯಲ್ಲಿ ಅಧಿಕಾರಿ ಬಿಇಡಿ ಕಾಲೇಜಿನ ಪ್ರಾಚಾರ್ಯರಾದ ಎಚ್.ಎ ವಿಜಯಕುಮಾರ್, ರವರು ವಾಲ್ಮೀಕಿ ಮಹರ್ಷಿ ಜಯಂತಿ ಕುರಿತು ಮಾತನಾಡುತ್ತ ಜಗತ್ತು ಕಂಡ ಮೊಟ್ಟ ಮೊದಲ ಕವಿ ವಾಲ್ಮೀಕಿ ಮಹರ್ಷಿ ಅವರ ಕಾವ್ಯ ಆದಿ ಕಾವ್ಯ ಅದುವೇ ಶ್ರೀ ರಾಮಾಯಣ ಎಂದು ತಿಳಿಸಿದರು. ಹಾಗೆ ಈ ಸಂದರ್ಭದಲ್ಲಿ ಬಿ. ಫಾರ್ಮಸಿ ಪ್ರಾಚಾರ್ಯ ಜಯಚಂದ್ರ ಇಂಗ್ಲಿಷ್ ಮಾಧ್ಯಮ ಮುಖೋಪಾಧ್ಯಾಯ ಮಲೈಕಾ, ಜ್ಞಾನಭಾರತಿ ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಮಂಜುನಾಥ್, ಬಿಇಡಿ ಕಾಲೇಜಿನ ಉಪನ್ಯಾಸಕರದ ಎನ್ ಬಸವರಾಜ್, ಕೆ ನಾಗರಾಜ್, ಪ್ರದೀಪ್, ಅರ್ಚನ ಮತ್ತು ಸಂಸ್ಥೆಯ ಎಲ್ಲಾ ಶಿಕ್ಷಕರು, ಮಕ್ಕಳು ಮತ್ತು ಪ್ರಾ ಶಿಕ್ಷಣಾರ್ಥಿಗಳು ಹಾಜರಿದ್ದರು. ನಿರೂಪಣೆ ಕಾವ್ಯ ಬಣಕರ್, ಸ್ವಾಗತ ನಿಂಗಪ್ಪ, ವಂದನಾರ್ಪಣೆ ಮಹೇಶ್, ಪ್ರಾರ್ಥನೆ ಕಾವ್ಯಕ್ಕೆ ಸೌಂದರ್ಯ ನೆರವೇರಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ