ಉಜ್ಜಿನಿ ಗ್ರಾಮದಲ್ಲಿ ಪ್ರಥಮ ವಾರ್ಷಿಕ ಮಹಾಜನ ಸಭೆ.
ಉಜ್ಜಿನಿ ಸ.28

ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಶ್ರೀ ಮರುಳುಸಿದ್ದೇಶ್ವರ ರೈತ ಉದ್ಪಾದಕರ ಸೌಹಾರ್ದ ಸಹಕಾರ ಸಂಘದ ಪ್ರಥಮ ವಾರ್ಷಿಕ ಸಭೆ ಶನಿವಾರ ಉಜ್ಜಿನಿ ಸಂಘದ ಅಧ್ಯಕ್ಷರಾದ ಕೆ. ಕೊಟ್ರೇಶ್ ಶ್ರೀಕಂಠಪ್ಪರವರ ಅಧ್ಯಕ್ಷತೆಯಲ್ಲಿ ಜರುಗಿತು. ಎಸ್ ತಿಪ್ಪೇಸ್ವಾಮಿ ಜಿಲ್ಲಾ ಸಂಯೋಜಕರು ಸಸ್ಯ ಅಗ್ರಿ ಸಂಸ್ಥೆ ಬೆಂಗಳೂರು ಇವರು ಮಾತನಾಡಿ ರೈತರು ಆದಾಯ ದ್ವಿಗುಣ ಗೊಳ್ಳಬೇಕಾದರೆ ರೈತರು ತಮ್ಮ ವ್ಯವಹಾರವನ್ನು ನಮ್ಮ ಸಂಘದ ಮುಖಾಂತರ ಮಾಡಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ನಿರ್ದೇಶಕರಾದ ಬಿ.ಶಿವಕುಮಾರ್ ಸಂಘದ ಉಪಯೋಗ ಮತ್ತು ಸಂಘದ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು. ಹಾಗೂ ಸಿಇಓ ವಿಶ್ವನಾಥ್ 2023. 24 ನೇ. ಸಾಲಿನ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು. ಕೆ. ಕೊಟ್ರೇಶ್ ಶ್ರೀಕಂಠಪ್ಪ. ಅಧ್ಯಕ್ಷೀಯ ಭಾಷಣದಲ್ಲಿ ಸಂಘ ಸ್ಥಾಪನೆಯಾಗಿ ನಡೆದು ಬಂದ ದಾರಿ ವಿವರಿಸಿದರು. ಯು ಜಂಬಣ್ಣ ಸ್ವಾಗತ ಮತ್ತು ನಿರೂಪಣೆ ಕಾರ್ಯಕ್ರಮ ನಡೆಸಿ ಕೊಟ್ಟರು ಸಂಘದ ನಿರ್ದೇಶಕರು ಹಾಗೂ ಶೇರುದಾರರು ಪ್ರಮುಖರಾದ ಮಂಗಾಪುರ ಗ್ರಾಮದ ಗುರು ಬಸವರಾಜ ವಕೀಲರು ನಿಂಬಳಗೇರೆ ಗ್ರಾಮದ ಬಿ ಎಸ್ ರಾಜಣ್ಣ ಉಜ್ಜಿನಿ ಬಸವರಾಜ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು