ಅಬ್ಬಿಗೇರಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ 33 ನೇ. ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ – ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು).

ಅಬ್ಬಿಗೇರಿ ಸ.28

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ 33 ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ಅಕ್ಟೋಬರ್ 3 ರಿಂದ 12 ರ ವರೆಗೆ ಜರುಗಲಿದೆ ಎಂದು ಶ್ರೀ ರಂಭಾಪುರಿ ಡಾ, ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ದಿನದ ಕಾರ್ಯಕ್ರಮಗಳು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದ್ದು ಅಕ್ಟೋಬರ್ 3 ರಂದು ಕೇಂದ್ರ ಜಲಶಕ್ತಿ ಹಾಗೂ ರೇಲ್ವೆ ಖಾತೆ ರಾಜ್ಯ ಸಚಿವ ವ್ಹಿ. ಸೋಮಣ್ಣ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿ.ಪ.ಸದಸ್ಯ ಎಸ್.ವಿ. ಸಂಕನೂರ, ಶಾಸಕ ಚಂದ್ರು ಲಮಾಣಿ, ಗ್ರಾ.ಪಂ.ಅಧ್ಯಕ್ಷ ನೀಲಪ್ಪ ದ್ವಾಸಲ, ಉಪಾಧ್ಯಕ್ಷೆ ಅಕ್ಕಮ್ಮ ಡೊಳ್ಳಿನ, ಕೆ. ಪ್ರಕಾಶ್, ಕೆ.ಎಮ್.ಸುರೇಶ್, ತೋಟಪ್ಪ ಕುರಡಗಿ, ಸಿ.ವಿ.ಚಂದ್ರಶೇಖರ್, ಕೆ.ಅಮರೇಶ ಪಾಟೀಲ ಭಾಗವಹಿಸುವರು. ದಿನಾಂಕ 4 ರಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ‘ರಂಭಾಪುರಿ ಬೆಳಗು’ ಬಿಡುಗಡೆ ಮಾಡುವರು. ಗಣಿ ಮತ್ತು ಭೂ ವಿಜ್ಞಾನ-ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಣ್ಣ ದೊಡ್ಡಮನಿ, ಟಿ.ಈಶ್ವರ, ಚಿತ್ರ ನಟ ದೊಡ್ಡಣ್ಣ, ದೇವರಮನೆ ಶಿವಕುಮಾರ ಭಾಗವಹಿಸುವರು. ದಿನಾಂಕ 5 ರಂದು ಗುರು ಇಂಗ್ಲೀಷ ಕೃತಿಯನ್ನು ರಾಜ್ಯ ಗೃಹ ಸಚಿವ ಡಾ, ಜಿ.ಪರಮೇಶ್ವರ ಬಿಡುಗಡೆ ಮಾಡುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಸಚಿವರಾದ ಡಿ.ಎನ್. ಜೀವರಾಜ್, ಬಿ.ಆರ್.ಯಾವಗಲ್,ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ,ಎಸ್.ಎಸ್. ಜ್ಯೋತಿ ಪ್ರಕಾಶ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ದಿನಾಂಕ 6 ರಂದು ಮುಖ್ಯ ಅತಿಥಿಗಳಾಗಿ ಸಂಸದ-ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಶಾಸಕ ಸಿ.ಸಿ.ಪಾಟೀಲ, ಪದ್ಮಶ್ರೀ ವಿಜಯ ಸಂಕೇಶ್ವರ, ಎಮ್.ಕೆ. ಪಟ್ಟಣಶೆಟ್ಟಿ, ವಿಜಯ ಬಾಬಣ್ಣ ಮೆಟಗುಡ್ಡ ಆಗಮಿಸುವರು. ದಿನಾಂಕ 7 ರಂದು ‘ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ’ ಕೃತಿಯನ್ನು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಬಿಡುಗಡೆ ಮಾಡುವರು. ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ವಿ.ಪ. ಸದಸ್ಯ ಸಲೀಂ ಅಹಮದ್, ಮಹಾಂತೇಶ ಕವಟಗಿಮಠ, ಗೀತಾ ಮಾಡಲಗೇರಿ ಸುಭಾಷ್ ಮ್ಯಾಗೇರಿ, ‘ ಫಕ್ಕೀರಪ್ಪ ಮಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 8 ರಂದು ‘ಕಾವ್ಯ ಕುಸುಮ’ ಕೃತಿಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡುವರು. ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ನೇಮಿ. ನಾಯಕ, ಮಾಜಿ ಶಾಸಕ ಡಿ.ಆರ್.ಪಾಟೀಲ, ಆನಂದಸ್ವಾಮಿ ಗಡ್ಡದ್ದೇವರಮಠ, ಸಂಯುಕ್ತ ಕಳಕಪ್ಪ ಬಂಡಿ ಮುಖ್ಯ ಅತಿಥಿಗಳಾಗಿರುವರು. 9 ರಂದು ಸಂಸದ-ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಗದ್ದೀಗೌಡರ, ಶಾಸಕರಾದ ಜಗದೀಶ ಗುಡಗುಂಟಿಮಠ, ಶರಣು ಸಲಗರ ಹುಬ್ಬಳ್ಳಿಯ ಬಸಯ ಹಿರೇಮಠ ಮುಖ್ಯ ಅತಿಥಿಗಳಾಗಿರುವರು. 10 ರಂದು ಮುಖ್ಯ ಅತಿಥಿಗಳಾಗಿ ಶಾಸಕರಾದ ಭರತರೆಡ್ಡಿ (ಬಳ್ಳಾರಿ), ಮಾನಪ್ಪ ಡಿ.ವಜ್ಜಲ (ಲಿಂಗಸುಗೂರ), ಟಿ.ಡಿ. ರಾಜೇಗೌಡ (ಶೃಂಗೇರಿ) ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ವೀರಣ್ಣ ಮತ್ತೀಕಟ್ಟಿ ಭಾಗವಹಿಸುವರು. ದಿನಾಂಕ 11 ರಂದು ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ‘ರುದ್ರಗಣಾಧಿಪ ವೀರಭದ್ರ’ ಕೃತಿಯನ್ನು, ವಿ.ಪ.ಸದಸ್ಯ ಸಿ.ಟಿ.ರವಿ ‘ಶ್ರೀ ಪೀಠದ ವಾರ್ತಾ ಸಂಕಲನ’ ಬಿಡುಗಡೆ ಮಾಡುವರು. ಮಾಜಿ ಸಂಸದ ರಾಜ ಅಮರೇಶ್ವರ ನಾಯಕ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಆಂಧ್ರದ ಮಾಜಿ ವಿ.ಪ.ಸದಸ್ಯ ಗುಂಡಮಾಲೆ ತಿಪ್ಪೇಸ್ವಾಮಿ, ಆಂಧ್ರ ಪ್ರದೇಶದ ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ ಶಿವಾನಂದಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.ಪ್ರಶಸ್ತಿ ಪ್ರದಾನ: 2024 ನೇ ಸಾಲಿನ ‘ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ತೆಲಂಗಾಣದ ಆರ್.ಎಮ್.ಪ್ರಭುಲಿಂಗ ಶಾಸ್ತ್ರಿ ‘ರಂಭಾಪುರಿ ಯುವಸಿರಿ’ ಪ್ರಶಸ್ತಿಯನ್ನು ದಾವಣಗೆರೆ ಹೆಚ್.ಎಮ್,ಬಸವರಾಜಯ್ಯ (ಅಕ್ಕಿ ರಾಜು), ‘ವೀರಶೈವ ಸಿರಿ’ ಪ್ರಶಸ್ತಿಯನ್ನು ಶಾಸಕ ಜಿ.ಎಸ್.ಪಾಟೀಲ, ‘ಶಿವಾಚಾರ್ಯ ರತ್ನ’ಪ್ರಶಸ್ತಿಯನ್ನು ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಹಾಗೂ ‘ಸಾಧನ ಸಿರಿ’ ಪ್ರಶಸ್ತಿಯನ್ನು ನರೇಗಲ್ಲ-ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಧಾನ ಮಾಡುವರು.ಉಪನ್ಯಾಸ: ನವರಾತ್ರಿಯಲ್ಲಿ ನವಶಕ್ತಿ ಆರಾಧನೆ ಕುರಿತು ಲಕ್ಷ್ಮೇಶ್ವರ ಡಾ, ಜಯಶ್ರೀ ಹೊಸಮನಿ, ಗುರು ಮಹಿಮೆಯ ಮಹತ್ವ ಕುರಿತು ಸಾಹಿತ್ಯ ಸಂಶೋಧಕ ಡಾ, ಅಡಿವೆಪ್ಪ ವಾಲಿ, ಜ್ಞಾನ ಸಾಧನೆಯಲ್ಲಿ ಸಿದ್ಧಾಂತ ಶಿಖಾಮಣಿಯ ಹಿರಿಮೆ ವಿಷಯವಾಗಿ ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಆಹಾರ-ಆರೋಗ್ಯ ಮತ್ತು ಆಧ್ಯಾತ್ಮ ಕುರಿತು ರಾಯಚೂರಿನ ಡಾ.ಅರುಣಾ ಹಿರೇಮಠ, ಸಾವಯವ ಕೃಷಿಯ ಮಹತ್ವದ ಬಗ್ಗೆ ಬೆಂಗಳೂರಿನ ಕೃಷಿ ತಜ್ಞ ಆನಂದ ಆಶೀಷರ್, ಧಾರ್ಮಿಕತೆಯಲ್ಲಿ ಮಹಿಳೆಯ ಪಾತ್ರ ಕುರಿತು ತುಮಕೂರಿನ ಡಾ.ಮೀನಾಕ್ಷಿ ಖಂಡಿಮಠ, ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ರಾಷ್ಟ್ರ ಪ್ರಜ್ಞೆ ವಿಷಯವಾಗಿ ಮೈಸೂರಿನ ಚಿಂತಕ ಎ.ಆರ್.ರಘುರಾಮ್ ಉಪನ್ಯಾಸ ನೀಡುವರು. ಗುರುರಕ್ಷೆ: ಸಮಾಜದ ವಿವಿಧ ರಂಗಗಳ ಗಣ್ಯರಿಗೆ, ಸ್ವಾಮೀಜಿಗಳಿಗೆ ಪ್ರತಿದಿನದ ಕಾರ್ಯಕ್ರಮದಲ್ಲಿ ಗುರುರಕ್ಷೆ ನೀಡಲಾಗುವುದು.ಮಠಾಧೀಶರ ಉಪಸ್ಥಿತಿ: ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ (ರಿ) ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು, ಸಿದ್ಧರಬೆಟ್ಟ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯರು, ನರೇಗಲ್-ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯರನ್ನು ಮೊದಲ್ಗೊಂಡು ಶಿರಕೋಳ, ಬೇರುಗಂಡಿ, ಬೆನಹಾಳ, ಜಿಗೆರಿ, ಸುಳ್ಳ, ಚಿಕ್ಕಮಗಳೂರು, ಸಿಂಧನೂರು-ಕನ್ನೂರು, ಬದಾಮಿ, ಮಸ್ಕಿ, ತಾವರೆಕೆರೆ, ಹಾಸನ, ನಾಗವಂದ, ಮುಗಳಖೋಡ, ಗದಗ, ಬೀರೂರು, ಸಗರ, ಬೆಳ್ಳಾವಿ,ಅಬ್ಬಿಗೇರಿ, ಯಲಬುರ್ಗ, ಸೂಡಿ, ದೇವಾಪುರ-ಸ್ಟೇಷನ್ ಬಬಲಾದ, ವೀರಾಪುರ, ಮಳಲಿ, ಎಲೆರಾಂಪುರ, ಯಂಕಂಚಿ, ಕಲಾದಗಿ, ಬಂಕಾಪುರ, ನಿಡಗುಂದಿಕೊಪ್ಪ, ಹಂಪಸಾಗರ, ನಿಡಗುಂದಿ, ದುಗ್ಲಿ-ಕಡೇನಂದಿಹಳ್ಳಿ, ತುಪ್ಪದಕುರಹಟ್ಟಿ, ಕೊಡಗಾನೂರ, ಶ್ರೀನಿವಾಸ ಸರಡಗಿ, ಬಿಳಕಿ, ಹರಪನಹಳ್ಳಿ, ಗುಂಡಕನಾಳ, ಪುರ್ತಗೇರಿ, ಅಡ್ನೂರು-ರಾಜೂರು, ಅಳವಂಡಿ, ನರಗುಂದ, ಮೈಸೂರು,ಅಲಮೇಲ, ಲಿಂಗಸುಗೂರು, ಮೆಹಕರ, ಬಳ್ಳಾರಿ, ತ್ರಿಪುರಾಂತ-ಬಸವಕಲ್ಯಾಣ, ಚಳಗೇರಿ, ಕೊತಬಾಳ, ಅಕ್ಕಿಅಲೂರು, ಲಕ್ಷ್ಮೇಶ್ವರ, ಹಿರೇವಡ್ಡಟ್ಟಿ, ತಮ್ಮಡಿಹಳ್ಳಿ, ದೋಟಿಹಾಳ, ಕವಲೇದುರ್ಗ, ಜಕ್ಕಲಿ, ನೆಗಳೂರು, ಸಂಗೊಳ್ಳಿ, ಚಿಮ್ಮಲಗಿ, ಮಾಣಿಕ್ಯೇಶ್ವರಿ ಆಶ್ರಮ ಲಿಂಗಸುಗೂರ, ಸಿದ್ಧನಕೊಳ್ಳ-ಮಾರನಬಸರಿ ಮಠಗಳ ಶ್ರೀಗಳು ಭಾಗವಹಿಸುವರು.ಇಷ್ಟಲಿಂಗ ಮಹಾಪೂಜಾ: ವಿಶ್ವಶಾಂತಿ ಲೋಕಲ್ಯಾಣಕ್ಕಾಗಿ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಅಬ್ಬಿಗೇರಿ ನರೇಗಲ್ಲ ರಸ್ತೆಯ ಹೊಸ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ನಡೆಯುವುದು. ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ಅಬ್ಬಿಗೇರಿಗೆ ಆಗಮಿಸುವ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಭವ್ಯವಾಗಿ ಸ್ವಾಗತಿಸ ಲಾಗುವುದು. ದಿನಾಂಕ 12ರಂದು ವಿಜಯ ದಶಮಿಯ ದಿವಸ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆಗಾಗಿ ತಾವೇ ಸ್ವತ: ಕುಂಭ ಹೊತ್ತು ಅಗ್ರೋದಕ ತರುವರು. ಪ್ರತಿ ದಿನದ ಸಮಾರಂಭದ ನಂತರ ಶ್ರೀ ಪೀಠದ ಸಿಬ್ಬಂದಿ, ಧರ್ಮಾಭಿಮಾನಿ ಗಳಿಂದ ನಜರ್ (ಗೌರವ) ಸಮರ್ಪಣೆ ನಡೆಯುವುದು.ಅಕ್ಟೋಬರ್ 7 ರಂದು ರೋಣ ಕೃಷಿ ಇಲಾಖೆಯ ಸಹಕಾರ ದೊಂದಿಗೆ ‘ಕೃಷಿ ಮೇಳ’ ನಡೆಯುವುದು. ದಿನಾಂಕ 8 ರಂದು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಸಮಾರಂಭದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅನ್ನ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button