ಕಡ್ಲಿಗರ ಹುಣ್ಣುಮೆ ದಿನದಂದು ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ – ೮೯೨ ನೇ. ಜಯಂತಿ ಆಚರಣೆ.

ಕಲಬುರಗಿ ಜು.27

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಹಡಪದ (ಕ್ಷೌರಿಕ) ಸಮಾಜದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ೮೯೨ ನೇ. ಜಯಂತ್ಯೋತ್ಸವ ಕಾರ್ಯಕ್ರಮವು ಜುಲೈ 29 ರಂದು ಕಡ್ಲಿಗರ ಹುಣ್ಣುಮೆ (ಗುರು ಪೂರ್ಣಿಮೆ) ದಿನದಂದು, ಬುಧವಾರ ಬೆಳಿಗ್ಗೆ 11:30ಕ್ಕೆ ನಗರದ ಡಾ. ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಂಬಳೇಶ್ವರ ಸಂಸ್ಥಾನ ಮಠ, ಚಿತ್ತಾಪುರದ ಷ.ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುದಗಲ್‌ನ ಕಲ್ಯಾಣ ಆಶ್ರಮದ ಶ್ರೀ ಮಹಾಂತೇಶ್ವರ ಮಠದ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ವಿಶೇಷ ಅನುಭಾವ ಉಪನ್ಯಾಸ ನೀಡಲಿದ್ದು, ಶಹಾಬಾದ್‌ನ ಶರಣ ಹಡಪದ ಅಪ್ಪಣ್ಣ ದೇವಸ್ಥಾನದ ಶ್ರೀ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿಗಳು ಸಮ್ಮುಖ ವಹಿಸಲಿದ್ದಾರೆ.

ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ಥಳೀಯ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ಜಿಲ್ಲಾ, ನಗರ, ತಾಲ್ಲೂಕು ಹಾಗೂ ನಗರ ಘಟಕಗಳ ಪದಾಧಿಕಾರಿಗಳು, ಹಡಪದ (ಕ್ಷೌರಿಕ) ಸಮಾಜದ ನೌಕರರ ಸಂಘ, ಮಹಿಳಾ ಸಂಘದ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಸಮಾಜದ ಎಲ್ಲಾ ಬಂಧುಗಳು ಜುಲೈ 29 ರಂದು ಬುಧವಾರ ಕಡ್ಲಿಗರ ಹುಣ್ಣುಮೆ (ಕಡ್ಲಿಗಡಬ) ಗುರು ಪೂರ್ಣಿಮೆ ದಿನದಂದು ಜಿಲ್ಲೆಯಾದ್ಯಂತ, ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ತಮ್ಮ ಎಲ್ಲಾ ಕ್ಷೌರದ ಅಂಗಡಿಗಳನ್ನು ಒಂದು ದಿನ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತಿಯನ್ನು ಯಶಸ್ವಿ ಗೊಳಿಸ ಬೇಕೆಂದು ಮನವಿ ಮಾಡಲಾಗಿದೆ.

ಈ ಮನವಿಯನ್ನು ಜಿಲ್ಲಾ ಹಡಪದ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಹಾಗೂ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ, ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್ ಅವರು ವಿವಿಧ ಕನ್ನಡ ಪತ್ರಿಕೆಗಳ ಮೂಲಕ ಸಮಾಜದ ಬಂಧುಗಳಲ್ಲಿ ತಿಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button