ಅಂಬೇಡ್ಕರ್ ಸಮ ಸಮಾಜದ ಹೋರಾಟ ಮಾಡುತ್ತಿದ್ದರು – ತರೀಕೆರೆ.ಎನ್ ವೆಂಕಟೇಶ್.
ಚಿತ್ರದುರ್ಗ ಜು.27

ಜಾತಿ ಪದ್ಧತಿ ಅಸಮಾನತೆ ವಿರುದ್ಧ ಜ್ಯೋತಿ ಬಾಪುಲೆ ಡಾ, ಬಿ.ಆರ್ ಅಂಬೇಡ್ಕರ್ ರವರು ಜೀವನ ಪೂರ್ತಿ ಹೋರಾಟ ಮಾಡಿದ್ದರು ಎಂದು ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ಹೇಳಿದರು. ಅವರು ಪಟ್ಟಣದ ನವ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕಾರ್ಯಕರ್ತರು ಶೋಷಿತ ಸಮಾಜಗಳನ್ನು ಒಟ್ಟುಗೂಡಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಬೇಕು, ಸಮ ಸಮಾಜ ಜಾತಿ ರಹಿತ ಸಮಾಜ ನಿರ್ಮಾಣ ಮಾಡಬೇಕು, ಅದುವೇ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ರವರು ಸಮ ಸಮಾಜದ ಹೋರಾಟ ಮಾಡುತ್ತಿದ್ದರು ಎಂದರು.
ಅಸ್ಪೃಶ್ಯರು ದಲಿತರು ದೇಶವನ್ನು ಆಳುವವರಾಗಬೇಕು ಎಂದು ಕನಸನ್ನು ಕಂಡವರು ಅದೇ ಮಾರ್ಗದಲ್ಲಿ ಕರ್ನಾಟಕದಲ್ಲಿ ದಲಿತ ಸಂಘಟನೆಯ ಪಿತಾಮಹ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ರವರು ನಮಗೆ ತೋರಿದ ಮಾರ್ಗವಾಗಿದೆ ಆದ್ದರಿಂದ ದಲಿತರು ಶೋಷಿತರು ವಿದ್ಯಾವಂತರಾಗಬೇಕು ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಕರೆ ಕೊಟ್ಟರು.
ರಾಜ್ಯ ಸಮಿತಿ ಸಭೆಯನ್ನು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟನೆ ಮಾಡಿದ ಚಿತ್ರ ನಟ ಅಹಿಂಸಾ ಚೇತನ್ ರವರು ಮಾತನಾಡಿ ಸಮಾಜದಲ್ಲಿ ಅನಿಷ್ಟ ಪದ್ದತಿಗಳಾದ ಜಾತಿಭೇದ ಲಿಂಗಭೇದ ನಾಶ ಮಾಡಬೇಕು ಸಮಾನತೆಗಾಗಿ ಹೋರಾಟ ಮಾಡಬೇಕು, ನಮ್ಮ ಮೂಲ ಶತ್ರುಗಳೆಂದರೆ ವ್ಯವಸ್ಥೆಯಾಗಿದೆ ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಬೇಕು ಚಳುವಳಿಯ ರೂಪಿಸಬೇಕು ಧಾರ್ಮಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ಜಾತಿ ಸಮಸ್ಯೆ, ಲಿಂಗ ಸಮಸ್ಯೆ ಈ ಅನಿಷ್ಟಗಳು ಬದಲಾಗಬೇಕು ಅಂಬೇಡ್ಕರ್ ಅವರ ಸಿದ್ಧಾಂತಗಳು ಜಾರಿಯಾಗಬೇಕು ಎಂದು ಹೇಳಿದರು.

ಡಾ, ಸುರೇಶ್ ಗೌತಮ್ ಮಾತನಾಡಿ ಅಂಬೇಡ್ಕರ್ ವಾದವನ್ನು ಸಾರುತ್ತ ಜನ ಸಾಮಾನ್ಯರಲ್ಲಿ ಜಾಗೃತಿ ಅರಿವು ಮೂಡಿಸಬೇಕು ಎಂದು ಹೇಳಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಮೈಸೂರಿನ ಕೆ ನಂಜಪ್ಪ ಬಸವನಗುಡಿ ಮಾತನಾಡಿ ಸಂಘದ ಗುರಿ ಉದ್ದೇಶಗಳನ್ನು ತಿಳಿಸಿದರು.
ರಾಜಶೇಖರ್ ಜಾಪನುರ್ ಮಾತನಾಡಿ ಮಹಿಳೆಯರ ಮೇಲಿನ ದೌರ್ಜನ್ಯ ಅಸಮಾನತೆ ಅತ್ಯಾಚಾರಗಳ ವಿರುದ್ಧ ಸಂಘಟನೆ ಹೋರಾಟ ಮಾಡುತ್ತಿದೆ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಹೆಚ್ಚು ಸಂಘಟಿತ ಹೋರಾಟಗಳನ್ನು ಮಾಡಬೇಕು ಎಂದರು.
ನವೀನ್ ಕುಮಾರ್ ಮಾತನಾಡಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕು ಆದರೆ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡ ಬಾರದು ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿ ಎಂದು ಹೇಳಿದರು.
ಹರ್ಷವರ್ಧನ್ ಮಾತನಾಡಿ ಯುವಜನರು ಅಂಬೇಡ್ಕರ್ ಮತ್ತು ಬಿ ಕೃಷ್ಣಪ್ಪರವರ ಹೋರಾಟಗಳ ಬಗ್ಗೆ ಅಧ್ಯಯನ ಮಾಡಬೇಕು ಏಕೆಂದರೆ ಯುವಕರು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ತಮ್ಮ ತಮ್ಮ ಗ್ರಾಮ ಹಳ್ಳಿಗಳಲ್ಲಿ ಸಂಘಟನೆ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಸಭೆಯ ಅಂತಿಮ ಘಟ್ಟದಲ್ಲಿ ಆಗಮಿಸಿದ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿದರು.

ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸಂಘಟನಾ ಸಂಚಾಲಕರಾದ ಬಾಗಲಕೋಟೆಯ ಹನುಮಂತ ಭಜಂತ್ರಿ, ತುಮಕೂರಿನ ವೆಂಕಟೇಶ್ ಸಿಎಸ್, ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ಶಿವಮೊಗ್ಗದ ವಿಜಯಲಕ್ಷ್ಮಿ ಪಿ ಬೆಂಗಳೂರಿನ ವಿಶಾಲಾಕ್ಷಿ ಚಂದ್ರಮ್ಮ ಕೊಡಗಿನ ಶೀಲಾ ರಾಜ್ ಅರಕಲಗೂಡಿನ ರೇಣುಕಾ ಹಾಗೂ ಜಿಲ್ಲಾ ಸಂಚಾಲಕರಾದ ಬಾಗಲಕೋಟೆಯ ಯಮನೂರಪ್ಪ ಹಲಗಿ, ಯಮನಪ್ಪ, ತುಮಕೂರಿನ ಓಂಕಾರ ಮೂರ್ತಿ, ಶಿವಮೊಗ್ಗ ನಸ್ರೀನ್ ಖಾನ್, ನಾಗರತ್ನ ಭದ್ರಾವತಿಯ ರುಕ್ಮಣಿ ಮತ್ತು ನಾಗರತ್ನ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನವೀನ್ ಕುಮಾರ್ ಚಳ್ಳಕೆರೆ ರವರನ್ನು ಜಿಲ್ಲಾ ಸಂಚಾಲಕರಾಗಿ ಹಾಗೂ ಸಂಘಟನಾ ಸಂಚಾಲಕರಾಗಿ ಹರ್ಷವರ್ಧನ್ ರವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
