ಬಾಕಿ ಉಳಿತಾಯ ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿದರು.
ನರೇಗಲ್ ಅ.27

ಸ್ಥಳೀಯ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದ ಮಾಲೀಕರು ಅನೇಕ ವರ್ಷಗಳಿಂದ ಬಾಡಿಗೆ ಹಣವನ್ನು ತುಂಬದೇ ಇರುವ ಕಾರಣ ಪ.ಪಂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು ವಾಣಿಜ್ಯ ಮಳಿಗೆಗಳಿಗೆ ಬೀಜ ಜಡಿದು ವಶಕ್ಕೆ ಪಡೆದರು. ರೋಣ ಶಾಸಕ ಜಿ.ಎಸ್ ಪಾಟೀಲರ ನೇತೃತ್ವದಲ್ಲಿ ಹಾಗೂ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಕೀರಪ್ಪ ಮಳ್ಳಿಯವರ ಅಧ್ಯಕ್ಷತೆಯಲ್ಲಿ ಅ. 8 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಂದಾಜು ₹ 20 ರಿಂದ ₹ 25 ಲಕ್ಷದ ವರೆಗೆ ಬಾಕಿ ಉಳಿದಿರುವ ಬಾಡಿಗೆ ಮೊತ್ತವನ್ನು ಮಾಲೀಕರಿಂದ ಪಡೆಯಬೇಕು ಹಾಗೂ ನಿಧನರಾದ ಮಾಲೀಕರ ಮಳಿಗೆಗಳನ್ನು ಮರಳಿ ವಶಕ್ಕೆ ಪಡೆಯಬೇಕು ಮತ್ತು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಪ.ಪಂ ಮಳಿಗೆಗಳ ಟೆಂಡರ್ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಗಿತ್ತು. ಅದರಂತೆ ಪಪಂ ಅಧಿಕಾರಿಗಳು ಕ್ರಮ ಜರುಗಿಸಿದರು.ಈ ವೇಳೆ ಮಾಹಿತಿ ನೀಡಿದ ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಬಾಡಿಗೆ ಹಣ ಕಟ್ಟುವಂತೆ ಮಾಲಿಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಅನೇಕ ಬಾರಿ ನೋಟೀಸ್ ನೀಡಲಾಗಿದೆ. ಅವರಿಗೆ ಅ. 24 ರವರೆಗೆ ಅವಕಾಶವೂ ನೀಡಲಾಗಿತ್ತು. ಈ ನಡುವೆ ಅನೇಕರು ಕಟ್ಟಿದ್ದಾರೆ ಆದರೆ ಸದ್ಯ ಬೀಗ ಜಡದಿರುವ 7 ಮಳಿಗೆಗಳಿಂದ ₹ 8.08 ಲಕ್ಷದಷ್ಟು ಬಾಡಿಗೆ ಉಳಿದಿದೆ. ಅವರು ಸ್ಪಂದಿಸದೇ ಇರುವ ಕಾರಣ ಮಳಿಗೆಗಳಿಗೆ ಬೀಗ ಹಾಕುವ ಅನಿವಾರ್ಯತೆ ಬಂದಿದೆ ಎಂದರು. ಒಂದು ವೇಳೆ ಹಣ ಕಟ್ಟದಿದ್ದರೆ ಆಸ್ತಿ ಮೇಲೆ ಬೋಜಾ ಹಾಕಿ ಡಿಸೆಂಬರ್ ಅಂತ್ಯದ ಒಳಗೆ ಟೆಂಡರ್ ಕರೆದು ಹರಾಜು ಪ್ರಕ್ರಿಯೇ ನಡೆಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳಾದ ಎಸ್.ಕೆ ದೊಡ್ಡಣ್ಣವರ, ರಮೇಶ ಹಲಗಿ, ಆರೀಫ್ ಮಿರ್ಜಾ, ಅಡಿವೆಪ್ಪ ಮೆಣಸಗಿ, ವಿ.ಐ ಮಡಿವಾಳರ, ಉದಯ ಮುದೇನಗುಡಿ, ಮಹಾದೇವ ಮ್ಯಾಗೇರಿ, ಎನ್.ಬಿ ಬೇಲೇರಿ, ಪಿ.ಜಿ ರಾಂಪುರ, ನೀಲಪ್ಪ ಚಳ್ಳಮರದ, ನಿಂಗಪ್ಪ ಮಡಿವಾಳರ, ಸಿ.ವಿ ಹೊನವಾಡ, ಜೆ.ಡಿ ಬಂಕಾಪುರ ಇದ್ದರು. ನರೇಗಲ್ ಪಟ್ಟಣ ಪಂಚಾಯತಿಯ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದ ಮಾಲಿಕರು ಅನೇಕ ವರ್ಷಗಳಿಂದ ಬಾಡಿಗೆ ಹಣವನ್ನು ಕಟ್ಟದಿರುವ ಕಾರಣ ಪ.ಪಂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಮಳಿಗೆಗಳಿಗೆ ಬೀಗ ಜಡಿಯಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ