ಕ.ದ.ಸಂ ಸಮಿತಿ ತಿಳಗೂಳ ಹಾಗೂ ಕೆರುಟಗಿ ಗ್ರಾಮ ಶಾಖೆಗಳ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.
ತಿಳಗೂಳ ಅ.27

ದೇವರ ಹಿಪ್ಪರಗಿ ತಾಲೂಕಿನ ತಿಳಗೂಳ ಹಾಗೂ ಕೆರುಟಗಿ ಗ್ರಾಮ ಶಾಖೆಗಳ ಪದಾಧಿಕಾರಿಗಳನ್ನು ಪ್ರೊ,ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ, ತಾಲೂಕು ಸಂಚಾಲಕರಾದ ಶ್ರೀ ಅಶೋಕ್ ಗುಡಿಸಲಮನಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಪರಶುರಾಮ ಬಡಿಗೇರ ಮುಖ್ಯ ಅತಿಥಿಗಳಾದ ಜಿಲ್ಲಾ ಸಂಚಾಲಕರಾದ ಶ್ರೀ ಶರಣು ಸಿಂಧೆ, ಶ್ರೀ ಲಕ್ಕಪ್ಪ ಬಡಿಗೇರ ಮತ್ತು ಕಲಕೇರಿ ವಲಯ ಶಾಖೆಗಳ ನೇತೃತ್ವದಲ್ಲಿ ಕಲಕೇರಿ ಪ್ರವಾಸಿ ಮಂದಿರದಲ್ಲಿ ಡಾಕ್ಟರ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೋಟೋ ಗೆ ಪೂಜೆಯನ್ನು ಸಲ್ಲಿಸಿ, ಪದಾಧಿಕಾರಿಗಳನ್ನು ತಿಳಗೂಳ ಗ್ರಾಮದ ಸಂಚಾಲಕರನ್ನಾಗಿ ಶ್ರೀ ಮಾಂತು ಸಂದಿಮನಿ ಹಾಗೂ ಕೆರುಟಗಿ ಗ್ರಾಮ ಸಂಚಾಲಕರನ್ನಾಗಿ ಅನಿಲ ಗುಡಿಮನಿ ಅವರನ್ನು ಎಲ್ಲಾ ಸಂಘಟನೆ ಪದಾಧಿಕಾರಿಗಳು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

ದಲಿತ ಸಂಘರ್ಷ ಸಮಿತಿಯ ತತ್ವ ಸಿದ್ಧಾಂತವನ್ನು ಮತ್ತು ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಭಾರತದ ಸಂವಿಧಾನದ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಜಾರಿಗಾಗಿ, ಬುದ್ಧ ಬಸವ ಅಂಬೇಡ್ಕರ್ ಅವರು ನಡೆದು ಬಂದ ದಾರಿಯಲ್ಲಿ ಸಾಗಿ ನೊಂದ ಬಂದವರ ಪರವಾಗಿ ಬಡವರ ಪರ ದಲಿತರ ಪರ, ಅಲ್ಪಸಂಖ್ಯಾತರ ಪರ, ರೈತರ ಪರ ಮಹಿಳೆಯರ ಪರ ನಿರ್ಗತಿಕರ ಪರವಾಗಿ ಸಂವಿಧಾನ ಬದ್ಧವಾಗಿರುವ ಹಕ್ಕುಗಳಿಗಾಗಿ ನಾವೇಲ್ಲರೂ ಒಗ್ಗಟ್ಟಾಗಿ ನ್ಯಾಯ ಯುತವಾದ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪಡೆಯೋಣ ಎಂದು ಲಕ್ಕಪ್ಪ ಬಡಿಗೇರ ಹೇಳಿದರು .ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಶ್ರೀ ಲಕ್ಷ್ಮಣ ಹೋಸಮನಿ, ಚಂದ್ರಶೇಖರ ಬಡಿಗೇರ, ಮಹಾದೇವ ಬೇಕಿನಾಳ, ದಾನೇಶ ಕೇಸರಿ, ಸಿದ್ದು ದೊಡಮನಿ, ಪರಶುರಾಮ ದೊರೆಗೊಳ, ಸಾಗರ ಹೊಸಮನಿ, ಸಾಯಬಣ್ಣ ನೀರಲಗಿ, ಸಚೀನ ಕೇಸರಿ, ಮಲ್ಲಪ್ಪ ಕಲಕೇರಿ, ಸಂಘಟನೆ ಪದಾಧಿಕಾರಿಗಳು ಸಂಚಾಲಕರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ