ಧಮ್ಮ ದೀಕ್ಷಾ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬನ್ನಿ – ಅನಿಲ್ ಕುಮಾರ್.
ಚಿಕ್ಕಮಗಳೂರು ಅ.27

ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಧಮ್ಮ ದೀಕ್ಷಾ ಕಾರ್ಯಕ್ರಮ ಏರ್ಪಡಿಸಲಾಗಿದೆ, ಜಿಲ್ಲೆಯಲ್ಲಿರುವ ಎಲ್ಲಾ ಉಪಾಸಕರು, ಉಪಾಸಕೀಯರು ತಪ್ಪದೇ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಭಾರತೀಯ ಬೌದ್ಧ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಅನಿಲ್ ಕುಮಾರ್ ರವರು ಹೇಳಿದರು. ಅವರು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿಯೂ ಸಹ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದಿನಾಂಕ 4/11/2024 ರಂದು ಸೋಮವಾರ ಚಿಕ್ಕಮಗಳೂರು ನಗರ ಮತ್ತು ತಾಲೂಕು ಸಮಿತಿ ರಚನೆ, ಮತ್ತು ದಿನಾಂಕ 10/11/2024 ರಂದು ಭಾನುವಾರ ತರೀಕೆರೆ ತಾಲೂಕು ಸಮಿತಿ ರಚನೆ, ದಿನಾಂಕ 11/11/2024 ಸೋಮವಾರ ಕಡೂರು ತಾಲೂಕು ಸಮಿತಿ ರಚನೆ, ದಿನಾಂಕ 15/11/2024 ರಂದು ಶುಕ್ರವಾರ ಮೂಡಿಗೆರೆ ತಾಲೂಕು ಸಮಿತಿ ರಚನೆ, ಹಾಗೂ ಕೊಪ್ಪ ಶೃಂಗೇರಿ ಎನ್.ಆರ್ ಪುರ 3 ತಾಲೂಕಿನ ಸಮಿತಿಗಳನ್ನು ದಿನಾಂಕ 17/11/2024 ರಂದು ಭಾನುವಾರ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಬಾಳೆಹೊನ್ನೂರಿನ ಎಂ.ವಿ ಭವಾನಿ ರವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಮತ್ತು ಜಿಲ್ಲೆಯಾದ್ಯಂತ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುತ್ತೇವೆ ಎಂದು ತಿಳಿಸಿದರು. ಪ್ರತಿ ಭಾನುವಾರ ದಂದು ಬುದ್ಧ ವಂದನೆ ಕಾರ್ಯಕ್ರಮವನ್ನು ಚಿಕ್ಕಮಗಳೂರಿನ ತೇಗೂರು ಬಳಿ ಇರುವ ಬುದ್ಧ ವಿಹಾರದಲ್ಲಿ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಈ ಸಭೆಯಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಎಲ್ಲರೂ ಸಹ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು