ದೇಶದ ಅಭಿವೃದ್ಧಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳಾಗಬೇಕು – ಜಿ.ಬಿ ವಿನಯ್ ಕುಮಾರ್.
ಕೊಟ್ಟೂರು ನ.20
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ದಿ.ನವೆಂಬರ್ 19 ಮಂಗಳವಾರ ದಂದು ಬಾಲಾಜಿ ಕನ್ವೇಷನ್ ಸೆಂಟರ್ನಲ್ಲಿ ಸಿದ್ದಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು ಹಾಗೂ ಖಡ್ಗಕ್ಕಿಂತ ಲೇಖನ ಅರಿತ ಎನ್ನುವುದು ನಿಶ್ಚಿತ ವಿಷಯ ಇದನ್ನು ಮಾದ್ಯಮದವರು ಸಾಬೀತು ಪಡಿಸುವ ಮುಂಚೂಣಿಯಲ್ಲಿ ಇರುತ್ತಾರೆ. ಇವರುಗಳು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆ ಆಗಿ ಕೆಲಸಗಳನ್ನು ಅಚ್ಚು ಕಟ್ಟಾಗಿ ಕಾರ್ಯ ನಿರ್ವಸುತ್ತಾರೆ. ಇವರುಗಳಿಂದ ಸಮಾಜ ಸುಧಾರಣೆ ಹೊಂದಲು ಸಾಧ್ಯ ಎಂದು ಆಶೀರ್ವಾಚನವನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಇನ್ ಸೈಟ್ಸ್, ಸಂಸ್ಥಾಪಕ. ಜಿ.ಬಿ ವಿನಯ್ ಕುಮಾರ್ ರವರು ಈ ದೇಶಕ್ಕೆ ಸಂವಿಧಾನ ರಚಿಸಿದ ಡಾ, ಬಿ.ಆರ್ ಅಂಬೇಡ್ಕರ್ ರವರು ಮುಖೇಶ್ ಅಂಬಾನಿಗೂ ಒಂದೇ ಓಟಿನ ಪವರ್ ಒಂದು ಸಹಜ ವ್ಯಕ್ತಿಗೂ ಒಂದೇ ಓಟಿನ ಪವರ್ ಇದೆ. ಹೀಗಾಗಿ ರಾಜಕಾರಣದಲ್ಲಿ ಹೊಸಬರಿಗೆ ಅವಕಾಶ ಸಿಗಬೇಕು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣದ ಅತ್ಯವಶ್ಯಕವಿದೆ ಅದರಲ್ಲಿಯೂ ಪ್ರಮುಖವಾಗಿ ಗ್ರಾಮೀಣ ಮಟ್ಟದಲ್ಲಿ ಈ ತರಹದ ಶಿಕ್ಷಣ ನೀಡಿದರೆ ದೇಶವನ್ನು ಪ್ರಥಮ ಸ್ಥಾನವಾಗಿ ಪ್ರಗತಿಯತ್ತ ಕೊಂಡೊಯ್ಯಬಹುದು ಯುವಕರಿಗೆ ರಾಜಕೀಯದಲ್ಲಿ ಪಾತ್ರ ಏನು ಮತ್ತು ಅದರ ಮಹತ್ವ ತಿಳಿಸಿದರು.
ಈಗಿನ ಸಮಾಜದಲ್ಲಿ ಉತ್ತಮ ಗೌರವ ಸ್ಥಾನಮಾನದ ತುಂಬಾ ಅವಶ್ಯಕವಿದೆ ಇದನ್ನು ಪಡೆದು ಕೊಳ್ಳಲು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿ ಕೊಳ್ಳಬೇಕು ಇದು ಪುಸ್ತಕದ ಮಹತ್ವ ತಿಳಿದಾಗ ಮಾತ್ರ ಸಾಧ್ಯ ಮೊದಲು ಪುಸ್ತಕದ ಪ್ರೇಮಿಯಾಗಬೇಕುಸಮಾಜದಲ್ಲಿ ಶೈಕ್ಷಣಿಕ ಅಸಮಾನತೆ ತೊಲಗಿಸಿದರೆ ಮಾತ್ರ ಸಮಾಜ ಸುಧಾರಣೆ ಹೊಂದಲು ಸಾಧ್ಯ ಸಮಾಜದ ನಾಲ್ಕನೇ ಅಂಗವಾದ ಪತ್ರಕರ್ತರ ಉದ್ದೇಶ ಪ್ರಾಮಾಣಿಕವಾಗಿ ಇದ್ದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಇಂತಹ ಕಾರ್ಯಕ್ರಮಗಳಿಗೆ ಈ ಭಾಗದ ಪ್ರಮುಖ ನಾಯಕರು ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿ ಹಾಕಿದರೆ ಅವರುಗಳು ಬರುವುದಿಲ್ಲ ಯಾಕೆಂದರೆ ಅವರಿಗೆ ರಾಜಕೀಯ ಲಾಭ ಇಲ್ಲ ಅಂತ ಗೊತ್ತಿದೆ ಅದೇ ಸಾವಿರಾರು ಜನ ಸೇರಿಸುವ ಕೆಲಸ ನಡೆಯಲ್ಲಿ ಅಲ್ಲಿಗೆ ಬಂದು ನಾಟಕೀಯ ಭಾಷಣ ಮಾಡಿ ತಮ್ಮ ಪ್ರಭಾವವನ್ನು ಬಿರುತ್ತಾರೆ ಇದು ನಮ್ಮ ನಿಮ್ಮ ಎಲ್ಲಾರ ದುರಂತ ಎಂದು ಹೇಳಿದರು.
ಪತ್ರಕರ್ತರ ಸೌಲಭ್ಯ ಕುರಿತು ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ ಪತ್ರಕರ್ತರಿಗೆ ಮೂಲ ಸೌಕರ್ಯ ಕೂಡ ಇಲ್ಲದಾಗಿದೆ ಆದರೂ ಸಹ ಸಮಾಜ ಮುಖಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಬಗ್ಗೆ ಸರ್ಕಾರವನ್ನು ಗಮನ ಸೆಳೆಯುವಂತೆ ಮಾಡಲಾಗುವುದು ಮತ್ತು ವಿದ್ಯಾರ್ಥಿಗಳ ಜೊತೆ ಪತ್ರಕರ್ತರ ಕರ್ತವ್ಯಗಳ ಬಗ್ಗೆ ಕುರಿತು ಕಾ.ನಿ.ಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೇ ಮಲ್ಲಿಕಾರ್ಜುನ್ ರವರು ಮಾತನಾಡಿದರು. ವಿ.ಟಿ.ಎಸ್ ತಿಪ್ಪೇಸ್ವಾಮಿ, ಬಿ.ಮರಿಸ್ವಾಮಿ, ತೆಗ್ಗಿನಕೇರಿ ಕೊಟ್ರೇಶ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಬದ್ದಿ ರೇಖಾ ರಮೇಶ್ ಉಪಾಧ್ಯಕ್ಷರಾದ. ಸಿದ್ದಯ್ಯ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬದ್ದಿ ದುರುಗೇಶ್, ಸಣ್ಣ ಪವಾಡಿ ಹನುಮಂತಪ್ಪ, ವಕೀಲ ಹನುಮಂತಪ್ಪ, ತಾ.ಪಂ ಸದಸ್ಯ. ಕಂದಗಲ್ಲು ಪರುಸಪ್ಪ, ರೈತ ಮುಖಂಡ ಎನ್.ಭರಮಣ್ಣ, ತಾ ಪಂ ಸದಸ್ಯ ಬುಡನ್ ಸಾಬ್ ಬೇವೊರು, ಪರುಸಪ್ಪ, ಶರಬಣ್ಣ ಮಂಗನಹಳ್ಳಿ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜ್, ಸನ್ನಿದಿ ಕಾಲೇಜ್,ಕೆ.ಸಿ.ಕೆ. ಕಾಲೇಜ್, ತಿಪ್ಪೆರುದ್ರಸ್ವಾಮಿ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮುಂತಾದವರು ಉಪಸ್ಥಿತರಿದ್ದರು ಪ್ರಾರ್ಥನೆ, ಮನೋಹರ್, ಸ್ವಾಗತ ಕೆ.ಶಿವರಾಜ್, ನಿರೂಪಣೆ ಸ್ವಾಮಿ, ನೆರವರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು