ಮನೆ ಮನೆ ನಳ ಸಂಪರ್ಕ ಯೋಜನೆಯ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ – ಶಾಸಕರು.
ಬನ್ನಿಹಟ್ಟಿ ನ.20
ತಾಳಿಕೋಟೆ ತಾಲೂಕಿನ ಬನ್ನಿಹಟ್ಟಿ ಪಿ.ಟಿ. ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರಿ ನೈರ್ಮಲ್ಯ ಉಪ ವಿಭಾಗ ಸಿಂದಗಿ 2024/2025 ನೇ. ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ.ಬನ್ನಿಹಟ್ಟಿ ಪಿ.ಟಿ ಗ್ರಾಮದಲ್ಲಿಮನೆ ಮನೆ ನಳ ಸಂಪರ್ಕ ಯೋಜನೆ ಆಂದಾಜು ಮೊಂತ್ತ ,84.29.ಲಕ್ಷ. ಕಾಮಗಾರಿ. ಭೂಮಿ ಪೂಜೆ ಸಮಾರಂಭ ನೆರವೇರಿತು. ದೇವರ ಹಿಪ್ಪರಗಿಯ ಮತಕ್ಷೇತ್ರದ ಜನಪ್ರಿಯ ಶಾಸಕರಾದ ರಾಜು ಗೌಡ ಪಾಟೀಲ್ . ಇವರು ಈ ಸಂದರ್ಭದಲ್ಲಿ ನಿಮ್ಮ ಗ್ರಾಮದಲ್ಲಿ ಯಾವುದೇ ಕೆಲಸಗಳು ಇದ್ದರೆ ಚಾಚು ತಪ್ಪದೇ ಸರಕಾರ ದಿಂದ ಅನುದಾನ ತಂದು ನಿಮ್ಮ ಕೆಲಸಗಳನ್ನು ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕಲಕೇರಿ ಟು ಆಸ್ಕಿ ರಸ್ತೆ ದುರಸ್ತಿ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.
ಯಮನೂರಿ ಸಿಂದಗಿರಿ ಇವರು ಎಸ್.ಡಿ.ಎಮ್.ಸಿ ಯ ಅಧ್ಯಕ್ಷರು ನಮ್ಮ ಗ್ರಾಮಗಳಲ್ಲಿ ಶಾಸಕರು ನಾವು ಯಾವುದೇ ಕೆಲಸಗಳನ್ನು ಕೇಳಿದರೆ ಚಾಚು ತಪ್ಪದೇ ಸರಕಾರ ದಿಂದ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯ ಇರಬಹುದು ಅನೇಕ ರಸ್ತೆಗಳ ದುರಸ್ತಿ ಇರಬಹುದು ಎಲ್ಲಾ ಕೆಲಸಗಳನ್ನು ಶಾಸಕರು ನಮ್ಮ ಗ್ರಾಮಕ್ಕೆ ಮಾಡಿದ್ದಾರೆ ಎಂದು ತಿಳಿಸಿದರು.ರವೀಂದ್ರ ಸುಧಾಕರ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.ಬಸನಗೌಡ ಪಾಟೀಲ್ ನಿವೃತ್ತಿ ಶಿಕ್ಷಕರು. ಶರಣು ಕುಂಬಾರ್.ಲಕ್ಷ್ಮಣ ಮಾದರ್. ಅಪ್ಪು ಗೌಡ ಪಾಟೀಲ್. ರಾಜಬಕ್ಷರ ತಾಳಿಕೋಟಿ. ಯಮನೂರಿ ಸಿಂದಿಗೇರಿ ಎಸ್.ಡಿ.ಎಂ.ಸಿ ಅಧ್ಯಕ್ಷರು. ಕಾಸಿಂಸಾಬ್ ನಾಯ್ಕೋಡಿ. ಇರಗಂಟಿ ಬಡಿಗೇರ್. ಸುನಿಲ್ ಪಾಟೀಲ್. ಶಿವಶಂಕರ ಟಕ್ಕಳಕಿ.ಇನ್ನೂ ಅನೇಕರು ಜೆಡಿಎಸ್ ಕಾರ್ಯಕರ್ತರು ಊರಿನ ಗ್ರಾಮಸ್ಥರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ.ತಾಳಿಕೋಟೆ