ಕನ್ನಡ ರಾಜ್ಯೋತ್ಸವದ ಹಬ್ಬದ ನಿಮಿತ್ಯವಾಗಿ ಕನ್ನಡ ಬಾವುಟಗಳು – ವಿತರಣಾ ಕಾರ್ಯಕ್ರಮ.

ನರೇಗಲ್ ನ.20

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಇಂದು ನವೆಂಬರ್ 1 ರ ಕನ್ನಡ ನಾಡಿನ ಜನತೆಗೆ ನಾಡ ಹಬ್ಬವಾಗಿ ಸಂಭ್ರಮ ಪಡತಕ್ಕಂತಹ ಈ ರಾಜ್ಯೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ.ಪಂ ಅಧ್ಯಕ್ಷ ಪಕೀರಪ್ಪ ಮಳ್ಳಿ ಬಾವುಟಗಳನ್ನು ಕನ್ನಡ ಅಭಿಮಾನಿಗಳಿಗೆ ಬಾವುಟಗಳನ್ನು ನೀಡುವುದರ ಮೂಲಕ ಬಿಡುಗಡೆ ಗೊಳಿಸಿ ಮಾತನಾಡಿ ಕನ್ನಡ ನಾಡು ನುಡಿ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಅರ್ಥವತ್ತಾಗಿ ಆಚರಿಸುವುದು ನಮ್ಮೆಲ್ಲರ ಹಿರಿಮೆ ಎಂದು ಹೇಳಿದರು. ಈ ವರ್ಷ ವಿಶೇಷವಾಗಿ ನರೇಗಲ್ ಪಟ್ಟಣ ಪಂಚಾಯತ್ ವತಿಯಿಂದ ಒಟ್ಟು ಸಾವಿರ ಕನ್ನಡ ಬಾವುಟಗಳನ್ನು ಪ.ಪಂ ಸದಸ್ಯರ ನೇತೃತ್ವದಲ್ಲಿ ಮನೆ ಮನೆಗಳ ಮೇಲೆ ಹಾರಿಸುವುದಾಗಿ ಹೇಳಿದರು. ಸಭೆಯಲ್ಲಿ ನಿವೃತ್ತ ಶಿಕ್ಷಕರಾದ ಎಂ.ಎಸ್ ದಡೆಸೂರಮಠ ಕನ್ನಡಾಭಿಮಾನಿಗಳಿಗೆ ಇದು ಸಂಭ್ರಮಾಚರಣೆಯಾಗಿದೆ. ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ. ಸ್ಥಾಯಿ ಚೇರಮನ್ ಮುತ್ತಪ್ಪ ನೂಲ್ಕಿ ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಮಹದೇವ್ ಬೇವಿನಕಟ್ಟಿ ಕ.ಸಾ.ಪ ತಾಲೂಕು ಕಾರ್ಯದರ್ಶಿ ಬಸವರಾಜ್ ಕುರಿ ಬೀಚಿ ಬಳಗದ ಸಂಚಾಲಕ ಈಶ್ವರ್ ಬೆಟಗೇರಿ ಮುಖಂಡರಾದ ಶಿವನಗೌಡ ಪಾಟೀಲ್ ನಿಂಗನಗೌಡ ಲಕ್ಕನಗೌಡ್ರ ವೀರಪ್ಪ ಜೋಗಿ ಕಳಕನಗೌಡ ಪಾಟೀಲ್ ಅಲ್ಲಭಕ್ಷಿ ನದಾಫ್ ಗುಡದಪ್ಪ ಗೋಡಿ ಮುಖ್ಯಾಧಿಕಾರಿ ಮಹೇಶ್ ನಿಡಶೇಶಿ ಹಾಗೂ ಪ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button