ನನ್ನವ್ವ…..

ನನ್ನವ್ವ ತಾನೆನನ್ನು ತಿನ್ನಲಿಲ್ಲ
ಎಲ್ಲವೂ ನನಗೆಂದೆ ಉಳಿಸಿದಳು
ನನ್ನವ್ವ ನಾ ಎಡವಿ ಬಿದ್ದಾಗ
ತಾನೊಳಗೊಳಗೆ ಮರುಗಿಹಳು
ನನ್ನವ್ವ ತನ್ನ ಬಗ್ಗೆ ಚಿಂತಿಸಲಿಲ್ಲ
ನನಗೆ ಹುಷಾರಿಲ್ಲವೆಂದಾಗ ಅತ್ತಳು
ನಿನಗೆಂದೂ ಏನು ಮಾಡಲಿ ನನ್ನವ್ವ
ಇಗೊ ನಾನಾಗುವೆ ನಿನ್ನ ಜೀವದಾಳು
✍️ಕು|| ತ್ರಿವೇಣಿ. ಆರ್. ಹಾಲ್ಕರ್
ಗೊಬ್ಬರವಾಡಿ. ವಿದ್ಯಾರ್ಥಿನಿ
ಕೃಷಿ ಮಹಾವಿದ್ಯಾಲಯ ಕಲಬುರ್ಗಿ