ಹನುಮಂತ ಕೋಟೆ ಬಳಗದಿಂದ ಸಂವಿಧಾನ – ಪೀಠಿಕೆ ವಿತರಣೆ.
ಮಾನ್ವಿ ನ. 26

ಪಟ್ಟಣದ ಸರ್ವ ಧರ್ಮ ವೆಲ್ಫೇರ್ ಟ್ರಸ್ಟ್ ವತಿಯಿಂದ ಸಂವಿಧಾನ ಪೀಠಿಕೆ ಓದುವ ಮತ್ತು ಪೀಠಿಕೆ ಪ್ರತಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದ್ದು ಮೊದಲಿಗೆ ಪ್ರಾಸ್ತವಿಕವಾಗಿ ಪ್ರಗತಿಪರ ಚಿಂತಕರಾದ ಈರೇಶ್ ಹುಲುಗುಂಚಿಯವರು ಸಂವಿಧಾನ ಸಮರ್ಪಣೆ ದಿನ ಭಾರತದ ಪ್ರಜೆಗಳಿಗೆ ಸಂತೋಷದ ದಿನ ಇದು ನಮ್ಮ ಜೀವನದ ಭೂನಾಧಿಯಾಗಿದೆ ಸಂವಿಧಾನವನ್ನು ಎಲ್ಲರ ಮನೆ ಮನಗಳಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿ ಹನುಮಂತ ಕೋಟೆ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ವಿತರಣೆ ಮಾಡಿದರು.

ತರುವಾಯ ನಿವೃತ್ತ ಮುಖ್ಯ ಗುರಗಳಾದ ಹುಸೇನಪ್ಪ ಇವರು ಸಂವಿಧಾನದ ಆಶಯಗಳನ್ನು ಈಡೇರಿಸುವ ಹೊಣೆ ನಮ್ಮೆಲರದಾಗಿದೆ, ಸಂವಿಧಾನದ ಎಲ್ಲಾ ವಿಷಯಗಳ ಸಾರಾಂಶ ಸಂವಿಧಾನ ಪೀಠಿಕೆಯಲ್ಲಿ ಅಡಗಿದೆ ಸಂವಿಧಾನ ಪೀಠಿಕೆ ಓದುವ ಮತ್ತು ಪ್ರತಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡ ಹನುಮಂತ ಕೋಟೆಯವರಿಗೆ ಧನ್ಯವಾದಗಳನ್ನು ತಿಳಿಸಿದರು. ತರುವಾಯ ವಿಮುಕ್ತಿ ಸಂಸ್ಥೆಯ ಮುಖ್ಯಸ್ಥರಾದ ಸತೀಶ್ ಫೆರ್ನಾಂಡಿಸ್ ಇವರು ಸಂವಿಧಾನ ಎಲ್ಲಾ ಜನಾಂಗದ ಅಭಿವೃದ್ದಿಯ ಮೂಲವಾಗಿದೆ ಸಂವಿಧಾನವನ್ನು ರಕ್ಷಿಸುವ ಪಸರಿಸುವ ಜವಾಬ್ದಾರಿ ಯುವ ಪೀಳಿಗೆ ಮೇಲೆ ಇದೆ ಎಂದರು.

ನಂತರ ಕಾಂಗ್ರೆಸ್ ಮುಖಂಡರಾದ ಖಾಲಿದ್ ಗುರು ಇವರು ಸಂವಿಧಾನ ನಮ್ಮೆಲ್ಲರ ಆದ್ಯ ದೈವ ಗ್ರಂಥವಾಗಿದೆ ನಾವೆಲ್ಲರು ಶಾಂತಿಯಿಂದ ಬದುಕಲು ಪ್ರೇರಣೆಯಾಗಿದೆ ಎಂದರು. ವರಿದಿಗರರಾದ ರವಿಕುಮಾರ್ ಶರ್ಮರವರು ಎಲ್ಲರೊಂದಿಗೆ ಸಂವಿಧಾನ ಪೀಠಿಕೆ ಓದಿ ಸಂವಿಧಾನ ಪೀಠಿಕೆ ಪ್ರತಿ ವಿತರಿಸಲಾಯಿತು. ಹನುಮಂತ ಕೋಟೆಯವರು ಸಮಾಜ ಸೇವೆಗೆ ಸಾರ್ವಜನಿಕರ ಸಹಕಾರ ಕೇಳಿದರು ನಂತರ ಪುರಸಭೆ ಪೌರ ಕಾರ್ಮಿಕರನ್ನು ಮತ್ತು ಸರಕಾರಿ ಮಹಿಳಾ ಕಾಲೇಜಿನ ಮುಖ್ಯ ಗುರಗಳಾದ ರವೀಂದ್ರ ಬಂಡಿಯವರನ್ನು ಸನ್ಮಾನಿಸಲಾಯಿತು, ವೇದಿಕೆ ಮೇಲೆ ಹನುಮಂತ ಮುಷ್ಟೂರ್ ವಕೀಲರು, ಹುಸೇನ್ ಪಾಶ ಗೋನವರ, ಮೊಹಮ್ಮದ್ ಪಾಶ, ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಪುರಸಭೆ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ