75 ನೇ. ವರ್ಷದ ಸಂವಿಧಾನ ಸಮರ್ಪಣಾ – ದಿನಾಚರಣೆ ಆಚರಣೆ.
ಮಾನ್ವಿ ನ.26

ಡಾ, ಬಿ.ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಗ್ರಂಥವು ಪ್ರತಿಯೊಬ್ಬರಿಗೂ ಕಾನೂನಿನ ಶ್ರೀರಕ್ಷೆ ಇದ್ದ ಹಾಗೆ ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಜರುಗಿದ 75 ನೇ. ವರ್ಷದ ಸಂವಿಧಾನ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಇದ್ದರೆ ನಾವು ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು, ಅಂಬೇಡ್ಕರ್ ಅವರ ಸಂವಿಧಾನ ದಿಂದಲೇ ನಾನು ಶಾಸಕನಾಗಿ ವೇದಿಕೆ ಮೇಲೆ ನಿಂತು ಮಾತನಾಡುವ ಅವಕಾಶ ಸಿಕ್ಕಿದೆ ಎಂದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದ ವಿಧಿಗಳನ್ನು ನೋಡಿದರೆ ಎಲ್ಲಾ ಜಾತಿಯ ಜನಾಂಗದವರಿಗೆ ಸಮಾನತೆ, ಭಾತೃತ್ವದ ಬಗ್ಗೆ ತಿಳಿಸಿದ್ದಾರೆಂದು ಶಾಸಕ ಹಂಪಯ್ಯ ನಾಯಕ ಅವರು ಅಂಬೇಡ್ಕರ್ ಅವರನ್ನು ಬಣ್ಣಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ