ಹೆಚ್ಚುತ್ತಿದೆ ಕಳ್ಳತನ ಪ್ರಕರಣ, ಪೋಲಿಸ್ ಇಲಾಖೆಗೆ – ಸವಾಲಾದ ಕಳ್ಳರು.
ಮಾನ್ವಿ ನ.27

ಪಟ್ಟಣದಲ್ಲಿ ಬೈಕ್, ಸರಗಳ್ಳತನ, ಮನೆ ಕಳ್ಳತನ ಪ್ರಕರಣ ಜಾಸ್ತಿ ಯಾಗುತ್ತಿದ್ದರಿಂದ ಮಾನ್ವಿಯ ಜನತೆ ಭಯದ ವಾತಾವರಣದಲ್ಲಿ ಜೀವನ ಕಳೆಯುವಂತಾಗಿದೆ.

ಮಾನ್ವಿಯ ಜನತೆ ವಾಕಿಂಗ್ ಬರ ಬೇಕಾದರೆ ಎದರುವಂತ ಪರಿಸ್ಥಿತಿ ಇದ್ದು, ಮಾನ್ವಿಯಲ್ಲಿ ಬೈಕ್ ಕಳ್ಳತನ, ಮನೆಗಳ್ಳತನ, ಸರಗಳ್ಳತನ ಹೆಚ್ಚುತ್ತಿರುವುದರಿಂದ ಜನರು ಊರಿಗೆ ತೆರಳುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.

ಮಾನ್ವಿಯಲ್ಲಿ ರಾತ್ರಿ ವೇಳೆ ಜನರು ಬೇಗ ಮಲಗುವಂತ ದುಸ್ಥಿತಿ ಇದ್ದು, ಬೇರೆ ಭಾಗದಿಂದ ಗ್ಯಾಂಗ್ ಬಂದಿದೆಯಾ ಎಂದು ಮಾನ್ವಿಯಲ್ಲಿ ಚರ್ಚೆ ನಡೆಯುತ್ತಿದ್ದು,
ಮಾನ್ವಿ ಪೊಲೀಸ್ ಇಲಾಖೆ ಖದೀಮರನ್ನು ಬಂಧಿಸಿ ಜನರಲ್ಲಿ ಸೃಷ್ಟಿಯಾದ ಆತಂಕವನ್ನು ತಿಳಿಗೊಳಿಸ ಬೇಕಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ