ಆಟಲ್ ಬಿಹಾರ ವಾಜಪೇಯಿ – ಹುಟ್ಟು ಹಬ್ಬದ ಆಚರಣೆ.
ಸಿಂದಗಿ ಡಿ.25

ಬಿಜೆಪಿ ಮಂಡಲ ವತಿಯಿಂದ ಸುಶಾಸನ ಕಾರ್ಯಕ್ರಮ ಈ ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಅಜಾತಶತ್ರು ಅಟಲ್_ಬಿಹಾರಿ ವಾಜಪೇಯಿ ಯವರ 100 ನೇ. ಹುಟ್ಟು ಹಬ್ಬದ ಅಂಗವಾಗಿ ಸುಶಾಸನ ದಿನ ಕಾರ್ಯಕ್ರಮವನ್ನು ಚಿಕ್ಕ ಸಿಂದಗಿ ಗ್ರಾಮದಲ್ಲಿ ಬೂತ್ ಅಧ್ಯಕ್ಷರಾದ ಶ್ರೀ ಅರವಿಂದ್ ಬಿರಾದಾರ, ಬೂತ್ ಅಧ್ಯಕ್ಷರ ಮನೆಯ ಮೇಲೆ ಭಾಜಪ ಪಕ್ಷದ ಬಾವುಟ ಹಾರಿಸಿ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಭಾವ ಚಿತ್ರಕ್ಕೆ ಪುಸ್ಪಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ ಭೂಸನೂರ ಅವರು ವಾಜಪೇಯಿ ಅವರ ಗುಣಗಳು ನಮ್ಮ ಜೀವನದಲ್ಲಿ ಅಳಡಿಸಿ ಕೋಳ್ಳಬೇಕು ಅವರ ಅಭಿವೃದ್ಧಿ ಯೋಜನೆಗಳು ಈ ದೇಶದಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಹೇಳಿದರು. ಬಿಜೆಪಿ ಅಧ್ಯಕ್ಷರಾದ ಸಂತೋಷ ಪಾಟೀಲ ಮಾತನಾಡಿ ವಾಜಪೇಯಿ ಯೋಜನೆ ನದಿ ಜೋಡಣೆ ಚಥುಸ್ಪದ ರಸ್ತೆ ಗ್ರಾಮ ಸಡಕ್ ಅವರ ವಿದೇಶಿ ನೀತಿಗಳು ಇವತ್ತು ಕೂಡಾ ಅಜರಾಮರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುರು ತಳವಾರ ಶ್ರೀಶೖಲಗೌಡ ಬಿರಾದಾರ ಶ್ರೀಶೈಲ ಚಳ್ಳಗಿ ಸಿದ್ರಾಮ್ ಆನಗೋಂಡ ನಿಲ್ಲಮ್ಮ ಯಡ್ರಾಮಿ ಅಶೋಕ ನಾರಾಯಣಪೂರ ಅನಸೂಯ ಪರಗೋಂಡ ಮಡಿವಾಳಪ್ಪಗೌಡ ಬಿರಾದಾರ ಬಸಲಿಂಗ ಬಿರಾದಾರ ಶಿವಯ್ಯ ಹಿರೇಮಠ ಬಸಯ್ಯ ಮಠಪತಿ ಗಂಗಾಧರ್ ಶಿಂಪಗೇರ ದೌವಲಪ್ಪ ಬಿರಾದಾರ ಶಂಕರೇಪ್ಪ ರಾಮಗೋಂಡ ಜಿ ಎಮ್ ಬಿರಾದಾರ ವಿಶ್ವನಾಥ್ ಯಾಳವಾರ ಭಿಮಾಂಶರ ಚೆನ್ನೂರ ಇನ್ನೂ ಹಲವಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ