ಮಾನ್ವಿಯಲ್ಲಿ ಸಂಭ್ರಮದಿಂದ ನಡೆದ – ರಂಜಾನ್ ಹಬ್ಬ.
ಮಾನ್ವಿ ಮಾ.30





ಮಾನ್ವಿ ತಾಲೂಕಲ್ಲಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮಾನ್ವಿಯಲ್ಲಿ ವಿಶೇಷ ಏನೆಂದರೆ ಹಿಂದೂ ಹಬ್ಬಗಳಲ್ಲಿ ಮುಸ್ಲಿಂ ಬಾಂಧವರು ಶುಭಾಶಯ ತಿಳಿಸುತ್ತಾರೆ. ಅದೆ ರೀತಿಯಲ್ಲಿ ರಂಜಾನ್ ಹಬ್ಬದಂದು ಹಿಂದೂ ಬಾಂಧವರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರ ಬಂದ ಮುಸ್ಲಿಂ ಬಾಂಧವರಿಗೆ ಶುಭಾಶಯ ವಿನಿಮಯ ತಿಳಿಸಿ ಕುಶಲೋಪರಿ ವಿಚಾರ ಹಂಚಿ ಕೊಂಡರು.
ಶಾಸಕ ಹಂಪಯ್ಯ ನಾಯಕ,ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ನಾನಾ ಪಕ್ಷದ ಮುಖಂಡರು ಶುಭಾಶಯ ತಿಳಿಸಿ ನಾವೆಲ್ಲರೂ ಒಂದಾಗಿ ಇರೋಣ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ