ಮೊಳಕಾಲ್ಮುರು ತಾಲೂಕಾ ಆಡಳಿತ ಸೌಧದಲ್ಲಿ ತಾಲೂಕಾ ಇಲಾಖೆಯ ಅಧಿಕಾರಿಗಳ ಕೆ.ಡಿ.ಪಿ ಸಭೆಯಲ್ಲಿ ಯೋಜನೆಗಳನ್ನು ರೂಪಿಸಲು ಮುಂದಾದ ಶಾಸಕರು.
ಮೊಳಕಾಲ್ಮುರು ಜೂನ್.13

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಇಂದು ಕೃಷಿ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್ ರೈತರಿಗೆ ಸರ್ಕಾರ ದಿಂದ ಸಹಾಯಧನ ಮೂಲಕವಾಗಿ ಚಾಲನೆ ನೀಡಿದರು ಮತ್ತು ಅರಣ್ಯ ಇಲಾಖೆ ವತಿಯಿಂದ ಗಿಡ ನೆಡುವುದು ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನ ರೀತಿಯ ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸಿ ಈ ಮರ ಮುಂದೆ ದೊಡ್ಡದಾಗಿ ನೆರಳು ಮತ್ತು ಒಳ್ಳೆ ಗಾಳಿಯನ್ನು ಕೊಡುತ್ತದೆ ಮತ್ತು ತಾಲೂಕಾ ಆಡಳಿತ ಸೌಧದಲ್ಲಿ ಕೆಡಿಪಿ ಸಭೆಯನ್ನು ಕರೆದು ಎಲ್ಲಾ ಇಲಾಖೆವಾರು ಅಧಿಕಾರಿಗಳನ್ನು ಕರೆಸಿ ಆಯಾ ಇಲಾಖೆಯ ಯೋಜನೆಗಳನ್ನು ಮುಂದುವರಿಸಲು ಸೂಚನೆ ಕೊಟ್ಟಂತ ಶಾಸಕರು ಮತ್ತು ಗ್ರಾಮೀಣ ಕುಡಿಯುವ ನೀರಿನ ಸೌಲಭ್ಯ ಆರೋಗ್ಯ ಹಿತ ಕಾಪಾಡುವ ಬಗ್ಗೆ ಮೂಲಭೂತ ಸೌಕರ್ಯಗಳು ಅರಣ್ಯದ ಭೂಮಿ ಒತ್ತುವರಿ ಗಮನ ಹರಿಸಬೇಕು ಮತ್ತು ರೈತರಿಗೆ ಕೃಷಿ ಇಲಾಖೆಯಿಂದ ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ಬೀಜ ಗೊಬ್ಬರ ತಾಡ್ಪಲ್ ಕೃಷಿ ಯಂತ್ರೋಪಕರಣಗಳು ಸಮರ್ಪಕವಾಗಿ ರೈತರಿಗೆ ತಲುಪಬೇಕೆಂದು ತಿಳಿಸಿದರು.

ವಿದ್ಯುತ್ ದೀಪ ಚರಂಡಿ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಯಾವುದೇ ರೀತಿಯ ಚರಂಡಿ ಸ್ವಚ್ಛತೆ ಇಲ್ಲದೆ ರೋಗಗಳಿಗೆ ತುತ್ತಾಗಬಾರದು ನಾಗರಿಕರು ಮತ್ತು ಶಿಕ್ಷಣ ಬಗ್ಗೆ ಎಚ್ಚರಿಕೆ ವಹಿಸಬೇಕು ಶೀತಲ್ ಗೊಂಡಿರುವ ಶಾಲೆ ಬಿಲ್ಡಿಂಗ್ ಗಳು ಅಡಿಗೆ ಕೋಣೆಗಳು ಶೌಚಾಲಯ ಮತ್ತು ಕಾಂಪೌಂಡ್ ಇವೆಲ್ಲವನ್ನೂ ಯಾವುದೇ ಗ್ರಾಮದಲ್ಲಾಗಲಿ ಮುನ್ನೆಚ್ಚರಿಕೆಯ ಕ್ರಮವಹಿಸಿ ಅನುಕೂಲ ಮಾಡಿ ಕೊಡಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.