ಕೆ.ಎಸ್.ಆರ್.ಟಿ.ಸಿ ನಿಗಮ ಘಟಕದ ವ್ಯವಸ್ಥಾಪಕ ಅಶೋಕ್ ಕುಮಾರ್ ರವರಿಗೆ – ದ.ವಿ.ಪ ತಾಲೂಕ ಅಧ್ಯಕ್ಷರಿಂದ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ತಾಳಿಕೋಟೆ ಫೆ.06

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ತಾಳಿಕೋಟಿ ಘಟಕದ ವ್ಯವಸ್ಥಾಪಕ ಅಶೋಕ್ ಕುಮಾರ್ ಬಸ್ಟ್ಯಾಂಡ್ ಮತ್ತು ಬಸ ಸಂಚಾರಕ್ಕೆ ಸಂಬಂದಿಸಿದ ವಿವಿಧ ಬೇಡಿಕಗಳನ್ನು ಆಗ್ರಹಿಸಿ ಮನವಿ ಸಲ್ಲಿಸಿದರು. ಅತೀ ಶೀಘ್ರದಲ್ಲೇ ಬಸ್ ಕಲಕೇರಿ ಬಸ್ ಸ್ಟ್ಯಾಂಡ್ ನಲ್ಲಿ ಮೂಲಭೂತ ಸೌಕರ್ಯಗಳನ್ನ ಹಾಗೂ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಮಾಡಿ ಕೊಡಬೇಕು ದ. ವಿ. ಪ ತಾಲೂಕ ಅಧ್ಯಕ್ಷ ಕಾಶಿನಾಥ್ ತಾಳಿಕೋಟಿ ಆಗ್ರಹ.ತಾಳಿಕೋಟಿಯ KSRTC ಘಟಕ ವ್ಯವಸ್ಥಾಪಕರಿಗೆ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಮನವಿ ಸಲ್ಲಿಸಿದ ಅವರು ಕಲಕೇರಿಯು ಬೃಹತ್ ಮಟ್ಟದ ವಿದ್ಯಾ ಕೇಂದ್ರ ವಾಗಿದ್ದೂ 16 ಗ್ರಾಮಗಳಿಂದ ವಿದ್ಯಾರ್ಥಿಗಳು 4 ಶಾಲಾ ಕಾಲೇಜುಗಳಿಗೆ ಬರುತಿದ್ದು, ಸಾರಿಗೆ ಇಲಾಖೆಯ ನಿರ್ಲಕ್ಷ್ಯ ದಿಂದ ಬಸ್ಟ್ ಸ್ಟ್ಯಾಂಡ್ ನಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಇಂದಾಗಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಹಲವಾರು ಸಮಸ್ಯೆಗಳನ್ನು ಎದುರಿಸ ಬೇಕಾಗಿದೆ ವಿವಿಧ ಬೇಡಿಕೆಗಳಾದ 1) ವಿದ್ಯಾರ್ಥಿನಿಯರಿಗೆ/ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಕೋಣೆ ನಿರ್ಮಾಣ ವಾಗಬೇಕು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಬಸ್ ಸ್ಟ್ಯಾಂಡ್ ನಲ್ಲಿ ಬಂದು ಸೇರುತ್ತಾರೆ ಆದರೆ ವಿಶೇಷ ವಿಶ್ರಾಂತಿ ಕೋಣೆ ಇಲ್ಲದ ಕಾರಣದಿಂದ ಹಲವಾರು ಸಮಸ್ಯೆಗಳನ್ನ ಎದುರಿಸ ಬೇಕಾಗಿದೆ. 2) CCTV ಕ್ಯಾಮೆರಾ ವ್ಯವಸ್ಥೆ ಮಾಡಿ ಕೊಡಬೇಕು, ಕಿಡಿ ಗೇಡಿಗಳಿಂದ ಅಹಿತಕರ ಘಟನೆಗಳನ್ನು ತಪ್ಪಿಸಲು ಹಾಗೂ ಉಪಧ್ಯಾಪಿ ಜನರಿಂದ ವಿದ್ಯಾರ್ಥಿನಿಯರಿಗೆ ಹಲವು ತೊಂದರೆ ಗಳಾಗುತ್ತಿದ್ದು.

ಕೂಡಲೇ CCTV ವ್ಯವಸ್ಥೆ ಆಗಬೇಕು 3) ಶುದ್ಧ ಕಿಡಿಯುವ ನೀರಿನ ಘಟಕ ವ್ಯಾವಸ್ಥೆ ಆಗಬೇಕು, ಸಾವಿರಾರು ಸಂಖ್ಯೆಯಲ್ಲಿ ಜನರು ಬಸ್ ಸ್ಟ್ಯಾಂಡ್ ನಲ್ಲಿ ಬಂದು ಸೇರುತ್ತಾರೆ ಆದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ 4) ವನಕಿಹಾಳ ಮತ್ತು ಬೂದಿಹಾಳ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ದ ಸಮಯದಲ್ಲಿ ಸೂಕ್ತ ಬಸ್ ವ್ಯವಸ್ಥೆ ಮಾಡಿ ಕೊಡಬೇಕೆಂದು ಈ ಎಲ್ಲಾ ಬೇಡಿಕೆಗಳು ಆದಷ್ಟು ಬೇಗ ಈಡೇರಿಸಬೇಕು ಇಲ್ಲದಿದ್ದರೆ ಕೂಡಲೇ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರಿನ ಹಿರಿಯರೊಂದಿಗೆ ಬೃಹತ್ ಮಟ್ಟದ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಈ ಸಂಧರ್ಭದಲ್ಲಿ ತಾಳಿಕೋಟಿ ಪೊಲೀಸ್ ಠಾಣೆಯ ಉಪ ನೀರಿಕ್ಷಕರು (PSI) ವಿದ್ಯಾರ್ಥಿ ಯುವ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ಇದೇ ಸಂಧರ್ಭದಲ್ಲಿ ದ.ವಿ.ಪ ತಾಳಿಕೋಟಿ ತಾಲೂಕ ಅಧ್ಯಕ್ಷ ಗುರುಪ್ರಸಾದ್ B.G ದ.ವಿ.ಪ ದೇವರ ಹಿಪ್ಪರಗಿ ತಾಲೂಕ ಅಧ್ಯಕ್ಷ ಕಾಶಿನಾಥ್ ತಾಳಿಕೋಟಿ, ಕಲಕೇರಿ ವಲಯ ಅಧ್ಯಕ್ಷ ಅರುಣ್ ಪೂಜಾರಿ, ಪ್ರಮೋದ್, ಯಮನೂರಪ್ಪ, ಪ್ರವೀಣ ಹಾಗೂ ವಿದ್ಯಾರ್ಥಿ ಯುವ ಜನರು ಉಪಸ್ಥಿತರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೖಬೂಬಬಾಷ.ಮನಗೂಳಿ.ತಾಳಿಕೋಟೆ