ಸರ್ಕಾರಿ ಆಸ್ಪತ್ರೆ ಸುರಕ್ಷಿತ ಹೆರಿಗೆ ನಗು ಮಗು ವಾಹನ ಬಳಕೆ.
ತರೀಕೆರೆ ಜುಲೈ.22

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ವಿಶೇಷವಾದ ಅನುದಾನ ನೀಡಿದೆ ಆಸ್ಪತ್ರೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹೆರಿಗೆ ತಜ್ಞರಾದ ಡಾ. ನಟರಾಜ್ ರವರು ವರ್ಗಾವಣೆಯಾಗಿದ್ದರೂ ಸಹ ದಾದಿಯರಿಗೆ ವಿಶೇಷವಾಗಿ ತರಬೇತಿ ನೀಡಿದ್ದಾರೆ. ಆದ್ದರಿಂದ ಆಸ್ಪತ್ರೆಯಲ್ಲಿರುವ ದಾದಿಯರು ಸುರಕ್ಷಿತವಾಗಿ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸುತ್ತಿದ್ದಾರೆ. ಎಂದು ಇಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕವಿತಾ ಎಂಬ ಬಾಣಂತಿಯನ್ನು ಅವರ ಊರಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ಮಾತನಾಡಿದರು. ನಾರ್ಮಲ್ ಡೆಲಿವರಿಗೆ ಸರ್ಕಾರಿ ಆಸ್ಪತ್ರೆಗೆ ಬನ್ನಿ ಇಲ್ಲಿ ಸುರಕ್ಷಿತ ಹೆರಿಗೆ ಮಾಡಿ ಆಸ್ಪತ್ರೆಯ ನಗು ಮಗು ವಾಹನದಲ್ಲಿ ಅವರ ಮನೆಗೆ ಬಿಟ್ಟು ಬರುವ ವ್ಯವಸ್ಥೆ ಮಾಡಲಾಗಿದೆ, ಆದ್ದರಿಂದ ಬೇರೆ ಬೇರೆ ಜಿಲ್ಲೆ ಊರುಗಳಿಂದ ಹೆರಿಗೆ ಮಾಡಿಸಿಕೊಳ್ಳಲು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿಯರು ಬರುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆಚ್ಚು ಹಣ ಕೊಟ್ಟು ಸಾಲಗಾರರಾಗ ಬೇಡಿರಿ ಎಂದು ಹೇಳಿದರು. ಹೆರಿಗೆ ಮಾಡಿಸಿಕೊಂಡ ಹೊಸದುರ್ಗ ತಾಲೂಕಿನ ಬೋಕಿಕೆರೆ ಗ್ರಾಮದ ಕವಿತಾ, ಪತ್ರಕರ್ತರೊಂದಿಗೆ ಮಾತನಾಡಿ ಈ ಆಸ್ಪತ್ರೆಯಲ್ಲಿ ನಮ್ಮ ಅಕ್ಕ ತಂಗಿ ಇಬ್ಬರೂ ಸಹ ಇಲ್ಲಿಯೇ ಹೆರಿಗೆ ಮಾಡಿಸಿಕೊಂಡಿದ್ದರು ಈಗ ನಾನು ಇದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದೇನೆ ನಾರ್ಮಲ್ ಹೆರಿಗೆ ಮಾಡಿದ್ದಾರೆ ನಾನು ನನ್ನ ಮಗು ಸುರಕ್ಷಿತವಾಗಿದ್ದೇವೆ ಇಲ್ಲಿಗೆ ಬಂದವರನ್ನು ತುಂಬಾ ಚೆನ್ನಾಗಿ ಸ್ಪಂದಿಸಿ ಕಷ್ಟ ಸುಖ ಕೇಳಿ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ, ಮತ್ತು ಒಳ್ಳೆಯ ಊಟ,ತಿಂಡಿ,ಕಾಫಿ, ಮೊಟ್ಟೆ, ಹಣ್ಣು, ಬ್ರೆಡ್ ಹಾಗೂ ಬಿಸಿ ನೀರು ಸಹ ಕೊಡುತ್ತಾರೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ತುಂಬಾ ಚೆನ್ನಾಗಿದೆ ಮಕ್ಕಳ ಡಾ. ಮಂಜುನಾಥ್ ರವರು ಸಹ ತುಂಬಾ ಚೆನ್ನಾಗಿ ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ