ಗ್ರಾ.ಪಂ ಗೆ ಉಪಾಧ್ಯಕ್ಷರಾಗಿ ಯಾಸ್ಮಿನಭಾನು.ಎನ್ ನಾಯ್ಕೋಡಿ – ಅವಿರೋಧ ಆಯ್ಕೆ.
ಹೋನ್ನಳ್ಳಿ ಮಾ.06

ಸಿಂದಗಿ ತಾಲೂಕಿನ ಹೋನ್ನಳ್ಳಿ ಗ್ರಾ.ಪಂ ಪಂಚಾಯ್ತಿಯ ನೂತನ ಉಪಾಧ್ಯಕ್ಷರಾಗಿ ಗ್ರಾಮದ ಯಾಸ್ಮಿನಬಾನು.ಎನ್ ನಾಯ್ಕೋಡಿ ಅವರು ಗುರುವಾರ ರಂದು ನಡೆದ ಉಪಾಧ್ಯಕ್ಷೆ ಆಯ್ಕೆ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗುವ ಮೂಲಕ ಹೋನ್ನಳ್ಳಿ ಗ್ರಾ.ಪಂ ಸದಸ್ಯರ ಸಹ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಈ ಮುಂದಿನ ಅವಧಿಗಾಗಿ ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ಯಾಸ್ಮಿನಬಾನು.ಎನ್ ನಾಯ್ಕೋಡಿ ಅವರು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣವಾಯಿತು. ಉಪಾಧ್ಯಕ್ಷ ಆಯ್ಕೆ ಚುನಾವಣೆ ಪ್ರಕ್ರಿಯೆದಂತೆ ಬೆಳಿಗ್ಗೆ ಯಿಂದ ನಾಮಪತ್ರ ಸಲ್ಲಿಕೆ ನಾಮಪತ್ರ ಪರಿಶೀಲನೆ ನಂತರ ಅವಿರೋಧ ಆಯ್ಕೆ ಘೋಷಣೆ ನಡೆಯಿತು 10 ಜನ ಸದಸ್ಯರು ಪಾಲ್ಗೊಂಡಿದ್ದರು. ಚುನಾವಣಾ ಅಧಿಕಾರಿಯಾಗಿ ಸಿಂದಗಿ ತಾ.ಪಂ ಇ.ಓ ರಾಮು ಅಗ್ನಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್.ಸಿ ನಾಯ್ಕೋಡಿ ಕಂಪ್ಯೂಟರ್ ಆಪರೇಟರ್ ಅಂಬರೀಶ್ ಪಾಟೀಲ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು. ಈ ಚುನಾವಣೆಗೆ ಪ್ರಮುಖರು ವಿಜುಗೌಡ ನಿಂಗನಗೌಡ ಸಂತೋಷ್ ಪಾಟೀಲ ಡಂಬಳ ಶ್ರೀಶೈಲ ಚಳ್ಳಗಿ ಅಮೋಗಿ ಜೈನಾಪುರ ರಾಚನಗೌಡ ಪಾಟೀಲ ಗ್ರಾಪಂ ಅಧ್ಯಕ್ಷರಾದ ಉಮಾಜಿ ಪು ಚವ್ಹಾಣ ತಿಪ್ಪಯ್ಯ ನೆಲಗಿಮಠ ಬಸನಗೌಡ ಪಾಟೀಲ ಸೋಮಶೇಖರಗೌಡ ಚಿರಲದಿನ್ನಿ ನಸುರುದ್ದೀನ್ ನಾಯ್ಕೋಡಿ ಹಿರೇಮಾನ್ ಪವಾರ ಹೋಬೂ ರಾ ಚವ್ಹಾಣ ಇಮ್ಲಾಬಾಯಿ ಪವಾರ. ವಿಷ್ಣು ರಾಠೋಡ ಮುಸ್ತಾಫ್ ವಡಗೇರಿ ಹಲವಾರು ಹೋನ್ನಳ್ಳಿ .ಗ್ರಾಮಸ್ಥರು ಮತ್ತಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ