ಜೆ.ಜೆ.ಎಂ ಕಳಪೆ ಕಾಮಗಾರಿಗೆ ಗ್ರಾಮಸ್ಥರಿಂದ ಉಗ್ರ – ಹೋರಾಟದ ಎಚ್ಚರಿಕೆ.
ಕಲಕೇರಿ ಆ .10

ಕಲಕೇರಿ ಗ್ರಾಮದ ಜೆ.ಜೆ.ಎಂ ಕಳಪೆ ಕಾಮಗಾರಿ 7 ನೇ. ವಾರ್ಡಿನಲ್ಲಿ ಕಳಪೆ ಕಾಮಗಾರಿ ನಡೆದಿದೆ. ಕಲಕೇರಿ ಗ್ರಾಮದ ತಾಲೂಕ ಪಂಚಾಯತಿಯ ಮಾಜಿ ಸದಸ್ಯರಾದಂತ ಲಕ್ಕಪ್ಪ ಬಡಿಗೇರ್ ಇವರು ಜೆ.ಜೆ.ಎಂ ಕಳಪೆ ಕಾಮಗಾರಿ ನಡೆದಿದೆ ಜೆ.ಜೆ.ಎಂ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕಲಕೇರಿ ಗ್ರಾಮಕ್ಕೆ ಬಂದು ಸೂಕ್ತವಾದ ನಿಮ್ಮ ಪೇಪರ್ ನಲ್ಲಿ ಯಾವ ರೀತಿ ಇರುತ್ತೆ ಆ ರೀತಿ ಕೆಲಸಗಳನ್ನು ಆಗಬೇಕು ಮತ್ತು ಯಾವ ವಾರ್ಡಿನಲ್ಲಿ ಕೆಲಸ ಮಾಡುತ್ತೀರಿ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಹೇಳಿ ಕೆಲಸಗಳನ್ನು ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಲಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಜ್ ಅಹ್ಮದ್ ಸಿರಸಗಿ. ಗ್ರಾಮ ಪಂ ಸದಸ್ಯರು ಅನಿಲ್ ಬಡಿಗೇರ್. ಕಾಸಿಂಸಾಬ್ ನಾಯ್ಕೋಡಿ. ಆನಂದ್ ಅಡಿಕಿ. ಸಲೀಂ ನಾಯ್ಕೋಡಿ. ಹಾಜಿ ಪಾಷಾ ಜಾಗಿರ್ದಾರ್. ಮಹಿಮದ್ ಕೆಂಭಾವಿ. ಚಂದ್ರಕಾಂತ್ ಬಡಿಗೇರ್. ಬಸವರಾಜ್ ಕಾಂಬಳೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಗ್ರಾಮಸ್ಥರು ಎಲ್ಲರೂ ಸೇರಿದಂತೆ ಕಳಪೆ ಕಾಮಗಾರಿ ನಮಗೆ ಬೇಕಿಲ್ಲ ಒಂದು ವೇಳೆ ಇದೇ ರೀತಿ ನೀವು ಮಾಡಿದರೆ ನಾವು ಊರಿನ ಗ್ರಾಮಸ್ಥರು ಎಲ್ಲರೂ ಸೇರಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ.ತಾಳಿಕೋಟೆ.