“ಹರುಷದಿ ಅರಳುವ ಯುಗಾದಿ”…..

ಬೇವಿನ ಕಹಿ ಬೆಲ್ಲದ ಸಿಹಿ
ಬೆರೆತರೆ ಜೀವನ ಜೋಕಾಲಿ
ಯುಗ ಯುಗದಿ ಕಹಿ ಕಳೆ
ಸಿಹಿ ದಿನಗಳ ಚಿಗುರಿ ಬೆಳ
ಬೇವು ಬೆಲ್ಲ ಸಿಹಿ ಕಹಿ
ಸಮರಸವೇ ಜೀವನದ ಸವಿ
ಉತ್ತಮತನದ ಬಾಳ್ವೇಗೆ ಬೆಳಕು
ಖುಷಿ ಕ್ಷಣಗಳು ಮಧುರ ಭಾವ
ಹೊಸ ದಾರಿ ಹೂವು ರಾಶಿ
ಅನವರತ ಹಬ್ಬದ ಸಂಭ್ರಮ
ನವ ವಸಂತದ ತಂಗಾಳಿ ತಂಪು
ತನು ಮನವು ಹರುಷದಿ ಕಂಪು
ಬಾಳಿನಲಿ ಯುಗಾದಿ ಒಲವು
ಗೆಲುವ ದಿನ ನವೊಲ್ಲಾಸವು
ವರುಷ ವರುಷವು ಹರುಷದಿ
ಅರುಳುವ ಹೊಸ ಯುಗಾದಿ
ಸರ್ವಜನ ಸುಖ ಭೋಗದ
ಶ್ರೀರಸ್ತು ಶುಭ ಮಸ್ತು ಸಿಹಿ ಕಹಿ
ಬೇವು ಬೆಲ್ಲ ಮಿಶ್ರಣ ಸವಿ ರುಚಿ
ಹಳೆ ಬೇರು ಹೊಸ ಚಿಗುರು ಚಂದ
ಬಾಳ ಯಾನದಲಿ ನವ ಚೈತನ್ಯ
ಯುಗಾದಿ ಜೀವನ ಜೋಕಾಲಿ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.