ಮರಗಳನ್ನು ಕಡಿದವರಿಗೆ 1₹ ಲಕ್ಷ ದಂಡ ಸುಪ್ರೀಂ ಕೋರ್ಟ್ ಆದೇಶ ಸ್ವಾಗತರ್ಹ – ಅಮರೇಗೌಡ ಮಲ್ಲಾಪುರ.

ಸಿಂಧನೂರು ಮಾ.27

ಇದೇ ಮಂಗಳವಾರ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರ ಬಂದಿದೆ. “ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಂದಂತೆ” ಅಥವಾ “ಮನುಷ್ಯನ ಕೊಲ್ಲುವುದಕ್ಕಿಂತಲೂ ದೊಡ್ಡ ಅಪರಾಧ ಮರಗಳನ್ನು ಕಡಿಯುವುದು” ಮರಗಳನ್ನು ಕಡಿದವರಿಗೆ 1₹ ಲಕ್ಷ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್ ನ ಆದೇಶ ಸ್ವಾಗತರ್ಹ ಎಂದು “ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ” ತಿಳಿಸಿದರು. ಸಿಂಧನೂರಿನ ವನಸಿರಿ ಪೌಂಡೇಷನ್ ಕಾರ್ಯಾಲಯದಲ್ಲಿ ಮಾತನಾಡಿದ ಅವರು ಒಂದು ದೊಡ್ಡ ಮರವನ್ನು ಬೆಳಸ ಬೇಕಾದರೆ ಸಾವಿರಾರು ವರ್ಷಗಳು ಬೇಕಾಗುತ್ತದೆ. ಅದೇ ಒಂದು ದೊಡ್ಡ ಮರವನ್ನು ಕಡಿಬೇಕಾದರೆ ಒಂದೇ ದಿನದಲ್ಲಿ ಕಡಿಯಬಹುದು ಆದರೆ ಆ ಮರವನ್ನು ಬೆಳಸ ಬೇಕಾದರೆ ಮನುಷ್ಯ ತನ್ನ ಜೀವನವನ್ನು ಒತ್ತೆ ಇಟ್ಟು. ಅದಕ್ಕೆ ಎಲ್ಲಿಂದಲೋ ತಂದು ನೀರು ಹಾಕಿ ಅದು ಕೊಡುವ ಶುದ್ಧವಾದ ಗಾಳಿಯನ್ನು ತೆಗೆದುಕೊಂಡು ಅದರಡಿಯಲ್ಲಿ ವಿಶ್ರಾಂತಿ ಪಡೆದು ನಿದ್ರೆಗೆ ಜಾರುತ್ತಾನೆ. ಅದನ್ನು ದಿನ ನಿತ್ಯ ಪೂಜಿಸುತ್ತಾನೆ. ಇದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಆಧುನಿಕತೆಗೆ ಮಾರು ಹೋಗಿ ಮರಗಳನ್ನು ಕಡಿಯುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಅಧಿಕಾರಿಗಳ ಗಮನಕ್ಕೆ ತರದೇ ಕಡಿಯುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಇದರಿಂದ ಬಿಸಿಲನಾಡು ಕಲ್ಯಾಣ ಕರ್ನಾಟಕವಾಗಿದೆ. ಇಂತಹ ಸಂಧರ್ಭದಲ್ಲಿ ಸುಪ್ರೀಂ ಕೋರ್ಟ್ ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತಲೂ ದೊಡ್ಡ ಅಪರಾಧ. ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಯಾವುದೇ ದಯೇ, ಕರುಣೆ ತೋರುವ ಅಗತ್ಯವಿಲ್ಲ, ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿದವರಿಗೆ 1₹ ಲಕ್ಷ ದಂಡ ವಿಧಿಸಿರುವುದು ಸ್ವಾಗತರ್ಹ. ಇಂತಹ ಘಟನೆ ಮತ್ತೆ ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸವಂತಾಗ ಬೇಕು ಎಂದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button