ದಲಿತ ವಿದ್ಯಾರ್ಥಿ ಪರಿಷತ್‌ನ ಕಾರ್ಯ – ಶ್ಲಾಘನೀಯ ಅಗಸಿಮನಿ.
ಗದಗ ಏ.15

ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್‌ನ ಕಾರ್ಯ ಶ್ಲಾಘನೀಯವೆಂದು ಮಾಜಿ ತಾಲೂಕ ಪಂಚಾಯತ್ ಸದಸ್ಯ ಎಸ್.ಎಸ್ ಅಗಸಿಮನಿ ಹೇಳಿದರು.ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಬಳಗಾನೂರ ಇವರ ವತಿಯಿಂದ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ. ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ, ಬಾಬು ಜಗಜೀವನ ರಾಮ್ ಅವರ 118 ನೇ. ಜನ್ಮ ಜಯಂತ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ಉಚಿತ ಬೇಸಿಗೆ ಸಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಬಹಳ ಒತ್ತು ಕೊಟ್ಟು ಜ್ಞಾನ ಪಾಂಡಿತ್ಯ ಪಡೆದ ಮಹಾನ್ ಮೇಧಾವಿ. ಅಷ್ಟೇ ಅಲ್ಲದೇ ಡಾ, ಬಾಬು ಜಗಜೀವನ್ ರಾಮ್ ಅವರು ಅಂತಹ ಅಸ್ಪೃಶ್ಯತೆ ಆಚರಣೆಯ ಕಾಲಘಟ್ಟದಲ್ಲಿಯೇ ಮಾಜಿ ಉಪ ಪ್ರಧಾನಿಯಾಗಿ ಶೋಷಿತ ಸಮುದಾಯದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಿದ ಮಹಾನ್ ನಾಯಕರು. ಅಂತಹವರ ಜನ್ಮ ಜಯಂತ್ಯೋತ್ಸವದ ಪ್ರಯುಕ್ತ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿರುವದು ನಿಜಕ್ಕೂ ಹೆಮ್ಮೆಯ ವಿಷಯವೆಂದು ಹೇಳಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮದ ದಲಿತ ಮುಖಂಡರು ಸಂಗೀತ ಶಿಕ್ಷಕರಾದ ಶ್ರೀ ಸೋಮಯ್ಯ ದೊಡ್ಡಮನಿ ಮಾತನಾಡಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೇಣದ ಬತ್ತಿಯ ಹಾಗೆ ತಮ್ಮನ್ನು ತಾವು ಸುಟ್ಟುಕೊಂಡು ಇಡೀ ಜಗತ್ತಿಗೆ ಬೆಳಕನ್ನು ಕೊಟ್ಟ ಮಹಾನ್ ಚೇತನ. ಅಂತಹವರ ಆದರ್ಶಗಳನ್ನ ನಾವೆಲ್ಲರೂ ಜೀವನದಲ್ಲಿ ಅಳವಡಿಸಿ ಕೊಂಡು ಮುನ್ನಡೆಯೋಣ. ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ, ಬಾಬು ಜಗಜೀವನ್ ರಾಮ್ ಅವರ ವಿಚಾರ ಧಾರೆಗಳು ಸರ್ವಕಾಲಕ್ಕೂ ಪ್ರಸ್ತುತವೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಗದಗ ತಾಲೂಕಾ ಉಪಾಧ್ಯಕ್ಷ ಮಂಜುನಾಥ ದೊಡ್ಡಮನಿ ಮಾತನಾಡಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸಾಕಷ್ಟು ನೋವು ಅವಮಾನ ಅನುಭವಿಸಿ ಅದೇ ಶಿಕ್ಷಣದಿಂದಲೆ ಎಲ್ಲರೂ ಅವರಿಗೆ ತಲೆ ಬಾಗಿ ಗೌರವಿಸುವಂತಹ ಮಹಾನ್ ಸಾಧನೆಯನ್ನ ಮಾಡಿ ಇಡೀ ವಿಶ್ವವೇ ಕೊಂಡಾಡುವಂತಹ ಶ್ರೇಷ್ಟ ಸಂವಿಧಾನವನ್ನ ಭಾರತ ದೇಶಕ್ಕೆ ಸಮರ್ಪಿಸಿದ್ದಾರೆ. ಅಂತಹವರ ಜೀವನವನ್ನ ನಾವು ಅನುಸರಿಸಿ ಕೊಳ್ಳಬೇಕು. ಮತ್ತು ಡಾ, ಬಾಬು ಜಗಜೀವನ್ ರಾಮ್ ಅವರು ದೇಶದ ಜನತೆ ಹಸಿವಿನಿಂದ ಬಳಲು ಬಾರದೆಂದು ಹಸಿರು ಕ್ರಾಂತಿಯನ್ನೇ ಮಾಡಿ ಜಗತ್ತಿನ ಹಸಿವು ನೀಗಿಸಿದ ಮಹಾನ್ ಮೇಧಾವಿ ಇಂತಹ ಇಬ್ಬರು ಮೇಧಾವಿಗಳನ್ನ ಮಕ್ಕಳು ಆದರ್ಶವಾಗಿಟ್ಟು ಕೊಂಡು ತಮ್ಮ ಜೀವನ ರೂಪಿಸಿ ಕೊಳ್ಳಲೆಂದು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹತ್ತರವಾದ ಯೋಜನೆಯನ್ನ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದೆ ಎಂದು ಹೇಳಿದರು.ಸಮಾರಂಭದ ಪ್ರಾಸ್ತಾವಿಕವಾಗಿ ಡಾ, ಬಾಬು ಜಗಜೀವನ್ ರಾಮ್ ಯುವಕ ಸಂಘದ ಮುಖಂಡ ಹನಮಂತ ಪೂಜಾರ ಮಾತನಾಡಿ. ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ, ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಆದರ್ಶಗಳು ದೇಶದ ಜನತೆಗೆ ದಾರಿ ದೀಪವಾಗಿವೆ. ಅಂತಹ ಮಹನೀಯರ ಜನ್ಮ ಜಯಂತ್ಯೋತ್ಸವದ ಅಂಗವಾಗಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿರುವದು ಮಹನೀಯರ ಜನ್ಮ ಜಯಂತ್ಯೋತ್ಸವಕ್ಕೆ ಅರ್ಥ ಪೂರ್ಣವಾದ ಕಾರ್ಯವಾಗಿದೆ ಎಂದು ಹೇಳಿದರು. ಗ್ರಾಮದ ಸಮಾನ ಮನಸ್ಕರರೆಲ್ಲರೂ ಸೇರಿ ಇನ್ನೂ ಇಂತಹ ಹಲವಾರು ಸಮಾಜ ಮುಖಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಡುವಲ್ಲಿ ಯಶಸ್ವಿ ಯಾಗೋಣ ಎಂದು ಹೇಳಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ವಕ್ತಾರ ವಿರುಪಾಕ್ಷಪ್ಪ ಹಿತ್ತಲಮನಿ. ಗ್ರಾಮದ ದಲಿತ ಮುಖಂಡರಾದ ಶ್ರೀ ಬಸವರಾಜ ಚಲವಾದಿ. ಶಿಕ್ಷಕರಾದ ಶ್ರೀ ಗಿರೀಶ ಚನ್ನಪ್ಪಗೌಡ್ರ. ಶ್ರೀ ಮತಿ ಸುನೀತಾ ಪಾಟೀಲ. ಶ್ರೀ ಗಂಗಾಧರ ಸಾಸ್ವಿಹಳ್ಳಿ ಭಾಗವಹಿಸಿದ್ದರು. ಸಮಾರಂಭವನ್ನು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಡಾ, ಬಾಬು ಜಗಜೀವನ್ ರಾಮ್ ಯುವಕ ಸಂಘದ ಮುಖಂಡರಾದ ಶ್ರೀ ಅನೀಲ ದೊಡ್ಡಮನಿ. ದೊಡ್ಡಪ್ಪ ಹೊಸಮನಿ. ಬಸವರಾಜ ಐಹೊಳಿ ಮಂಜುನಾಥ ಹಾದಿಮನಿ. ಹನಮಂತ ನಡುವಿನಮನಿ ಹಾಗೂ ಡಾ, ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಮುಖಂಡರಾದ ಹನಮಂತ ಚಲವಾದಿ. ರವಿ.ಚಲವಾದಿ. ರಾಜು ದೊಡ್ಡಮನಿ.ಸಂತೋಷ ಬೇವಿನಮರದ. ಪ್ರಮೋದ ಬಣಕಾರ.ಮುತ್ತು ಬೇವಿನಮರದ.ಗುರುರಾಜ ಚಲವಾದಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.