ಮಾದಕ ವಸ್ತುಗಳ ದುರ್ಬಳಕೆ, ತಡೆಗಟ್ಟುವಿಕೆ ಕುರಿತು – ವಿದ್ಯಾರ್ಥಿಗಳಿಗೆ ಕಾರ್ಯಕ್ರಮ.
ಹೊಸಪೇಟೆ ಏ.16

ವಿಜಯನಗರ ಮಹಾವಿದ್ಯಾಲಯ ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ, ವಕೀಲರ ಸಂಘ ಹೊಸಪೇಟೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯನಗರ ಇವರ ಸಂಯುಕ್ತಾ ಆಶ್ರಯದಲ್ಲಿ ಮಾದಕ ವಸ್ತುಗಳ ದುರ್ಬಳಕೆಯ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಅಬ್ದುಲ್ ರಹೀಮಾನ.ಎ ನಂದಗಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೊಸಪೇಟೆ ಆಗಮಿಸಿ ಉದ್ಘಾಟನೆ ನುಡಿಗಳನ್ನು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯನಗರ ಮಹಾ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎನ್. ಮಲ್ಲಿಕಾರ್ಜುನ ಮೆಟ್ರಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಹರಿಬಾಬು ಬಿ ಎಲ್ ಪೊಲೀಸ್ ವರಿಷ್ಠಾಧಿಕಾರಿಗಳು ವಿಜಯನಗರ ಇವರು ಮಾದಕ ವಸ್ತುಗಳ ದುರ್ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಜಯನಗರ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾದ ರವಿಕಿರಣ ಡಿ ಅವರು ಸ್ವಾಗತಿಸಿದರು. ಗೌರವಾನ್ವಿತ ಪ್ರಶಾಂತ್ ನಾಗಲಾಪುರ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯರು ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ ಇವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಗೌರವಾನ್ವಿತ ಸಂಜೀವ್ ಕುಮಾರ್ ಜಿ ಎರಡನೇ ಅಪರ ಸಿವಿಲ್ ನ್ಯಾಯಾಧೀಶರು ಇವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರ್ಬಳಕೆ ಮತ್ತು ತಡೆಗಟ್ಟುವಿಕೆ ನಿರ್ವಹಣೆಯ ಕಾಯ್ದೆ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ,ಡಾ, ಸೋಮಶೇಖರ್ ವೈದ್ಯರು 100 ಹಾಸಿಗೆ ಆಸ್ಪತ್ರೆ ಹೊಸಪೇಟೆ ಇವರು ಮಾದಕ ವಸ್ತುಗಳಿಂದ ಆಗುವ ಅನಾಹುತಗಳ ಕುರಿತು ಹಾಗೂ ಇಂದಿನ ಯುವಕರ ಮರಣದ ಅನುಪಾತದ ವಿಷಯ ಮಾತನಾಡಿದರು. ಗೌರವಾನ್ವಿತ ಶ್ರೀಮತಿ ಹೇಮಲತಾ ಬಿ ಹುಲ್ಲೂರ್ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ, ಗೌರವಾನ್ವಿತ ರಮೇಶ್ ಬಾಬು ಬಿಎನ್ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರು. ಗೌರವಾನ್ವಿತ ಶ್ರೀಮತಿ ಚೈತ್ರ ಜೆ ಮೂರನೇ ಅಪರ ಸಿವಿಲ್ ನ್ಯಾಯಾಧೀಶರು. ಗೌರವಾನ್ವಿತ ಶ್ರೀಮತಿ ಶ್ರುತಿ ತೇಲಿ ಅಪರ ಸಿವಿಲ್ ನ್ಯಾಯಾಧೀಶರು. ಪಿ ಶ್ರೀನಿವಾಸ್ ಮೂರ್ತಿ ಪ್ರಧಾನ ಕಾರ್ಯದರ್ಶಿಗಳು ವಕೀಲರ ಸಂಘ ವಿಜಯನಗರ ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ, ಎಂ.ಪ್ರಭುಗೌಡ ಅವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಈ ವೇಳೆ ಗುಡೆಕೋಟೆ ನಾಗರಾಜ ವಕೀಲರು ಸಂಡೂರು ಮತ್ತು ಆಡಳಿತ ಮಂಡಳಿ ಸದಸ್ಯರು ವಿ.ವಿ ಸಂಘ. ನಟರಾಜ ಅಕ್ಕಿ ವಕೀಲರು ಹಾಗೂ ಆಡಳಿತ ಮಂಡಳಿ ಸದಸ್ಯರು ವಿಜಯನಗರ ಕಾಲೇಜು ಹೊಸಪೇಟೆ ಟಿ ಸೋಮ್ಲಾ ನಾಯ್ಕ ನಿರೀಕ್ಷಕರು ಚಿತ್ತವಾಡಗಿ ಪೊಲೀಸ್ ಠಾಣೆ ಹೊಸಪೇಟೆ. ಶ್ರೀಮತಿ ಭಾರತಿ ಮಲ್ಲಿಕಾರ್ಜುನ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಅನುಷಾ ಪ್ರಾರ್ಥನೆ ಮಾಡಿದರು. ವಿಜಯನಗರ ಮಹಾ ವಿದ್ಯಾಲಯದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ