ಡಂಬಳದ ಭೀಮನ ಗೌಡರಿಗೆ – ಅಂತರಾಷ್ಟ್ರೀಯ ಗೌರವ.

ಡಂಬಳ ಮಾ. 02

ಸಿಂದಗಿ ತಾಲೂಕಿನ ಡಂಬಳ ಗ್ರಾಮದ ಡಾ, ಯ. ಭೀಮನಗೌಡ ಪಾಟೀಲ ಡಂಬಳ ಅಮೇರಿಕನ್ ಸೊಸೈಟಿ ಫಾರ್ ಹಾರ್ಟಿಕಲ್ಚರ (ತೋಟಗಾರಿಕೆ) ಸೈನ್ಸಸ್ ಎ.ಎಸ್.ಹೆಚ್.ಎಸ್ ಅಂತರರಾಷ್ಟ್ರೀಯ ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಡಂಬಳ, ಗೊಲಗೇರಿ ಗ್ರಾಮದ ಜನತೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಡಾ, ಭೀಮನಗೌಡರು ಮಾತನಾಡಿ ಇದು ನನಗೇ ದೊರೆತ ಪ್ರತಿ ಷ್ಠಿತ ಗೌರವ ಅಂತರರಾಷ್ಟ್ರೀಯ ತೋಟಗಾರಿಕೆ ಕ್ಷೇತ್ರದಲ್ಲಿ ಜಾಗತಿಕ ಸಹಕಾರವನ್ನು ಮುನ್ನಡೆಸುವ ಅವರ ಶಕ್ತಿಯನ್ನರೆತು ಭರವಸೆ ನೀಡಿದ ಎ.ಎಸ್.ಹೆಚ್.ಎಸ್ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.ಅಂತರಾಷ್ಟ್ರೀಯ ಹಾರ್ಟಿಕಲ್ಚರಲ್ ಸೈನ್ಸ್ ಸೊಸೈಟಿ ಆಯ್.ಎಸ್.ಹೆಚ್.ಎಸ್ ಮತ್ತು ಇತರ ಸಂಬಂಧಿತ ವೃತ್ತಿ ಪರ ಸಂಘಗಳೊಂದಿಗೆ ಪಾಲುದಾರಿಕೆಯನ್ನು ಬಲ ಪಡಿಸುವ ಮೂಲಕ, ನಿರ್ವಹಣಾ ಶೀಲತೆ ಹವಾಮಾನ ಪ್ರತಿರೋಧ, ಮತ್ತು ಮಾನವ ಆರೋಗ್ಯದಲ್ಲಿ ಹಾರ್ಟಿಕಲ್ಚರ್‌ನ ಪಾತ್ರಕ್ಕೆ ಸಂಬಂಧಿಸಿದ ಮುಖ್ಯ ವಿಚಾರಗಳಾಗಿದ್ದು ಇವರ ಮುಂದಿನ ಹೆಜ್ಜೆಗಳಿಗೆ ಎಂದು ಗೊಲಗೇರಿ ಗ್ರಾಮದ ಮುಖಂಡರಾದ ಬಸನಗೌಡ ಬಿರಾದಾರ ತಿಳಿಸಿ ಶುಭ ಕೋರಿದರು. ಲಕ್ಷ್ಮೀಗೌಡತಿ ಬಿರಾದಾರ. ಮೌಬುಬ ಕೋರವಾರ. ಶಾಂತಯ್ಯ ಹಿರೇಮಠ. ಮಲ್ಲನಗೌಡ ಪಾಟೀಲ. ಮಹೇಶ ಹುರಕಡ್ಲಿ. ಸಂತೋಷ ರದ್ದೇವಾಡಗಿ. ಗುರನಂದಯ್ಯ ಹಿರೇಮಠ. ಸುಭಾಸಗೌಡ ಪಾಟೀಲ. ಬಸನಗೌಡ ಮೇಲಿನಮನಿ. ವಿರೇಂದ್ರ ಪಾಟೀಲ ಅಪಾರ ಅಭಿಮಾನಿ ಬಳಗ ಸೇರಿದಂತೆ ಡಾ, ಭೀಮನಗೌಡ ಪಾಟೀಲರಿಗೆ ಅಭಿನಂದಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button