ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇಂಡಿ ಜೂನ್.21

ಇಂಡಿ ತಾಲೂಕಿನ ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗದ ಪೂರ್ವ ತಯ್ಯಾರಿಯಾಗಿ ದೈಹಿಕ ಶಿಕ್ಷಕರಾದ ಶಿವಾನಂದ ಕೆಂಗನಾಳ ಸಕಲ ವ್ಯವಸ್ಥೆ ಕಲ್ಪಿಸಿದ್ದರು. ಯೋಗವನ್ನು ಹೇಳಿಕೊಡಲು ರವಿಶಂಕರ ಗುರೂಜಿ ಆಶ್ರಮ ಬೆಂಗಳೂರ ದಿಂದ ಸಯ್ಯದ ಸಾಬ ಹಾಗೂ ಯಾದಗಿರಿಯಿಂದ ಸಮರ್ಥ ರಜಪೂತ ಇವರು ಆಗಮಿಸಿ ಅಂದಾಜು 550 ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಹೇಳಿಕೊಟ್ಟರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಎ. ಎಸ್. ಪಾಟೀಲ, ಪ್ರಾಂಶುಪಾಲರಾದ ಎಸ್. ಆರ್. ರಾಠೋಡ. ಮುಖ್ಯಗುರುಗಳಾದ ಎ. ಎಮ್. ಮುಚ್ಚoಡಿ ಹಾಗೂ ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗ, ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಿರೂಪಣೆ ಬಿ. ಎಸ್. ಖ್ಯಾದಿ ಕನ್ನಡ ಶಿಕ್ಷಕರು ಹಾಗೂ ವಂದನಾರ್ಪಣೆ ಜಯಮಾಲಾ ಪಾಟೀಲ ಸಮಾಜ ವಿಜ್ಞಾನ ಶಿಕ್ಷಕಿ ಇವರು ನೆರವೇರಿಸಿಕೊಟ್ಟಿದ್ದಾರೆ.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button