ಸೆಪ್ಟೆಂಬರ್ ನಲ್ಲಿ ರಾಜ್ಯ ಮಟ್ಟದ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿ ಆಯೋಜನೆ.
ಹುನಗುಂದ ಜುಂ .06

ಕರ್ನಾಟಕ ರಾಜ್ಯ ಖೋ ಖೋ ಅಸೋಶಿಯೇಷನ್ ಬಾಗಲಕೋಟ ಜಿಲ್ಲೆ ಘಟಕದ ವತಿಯಿಂದ ವಿಜಯ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸೆಪ್ಟ್ಂಬರ್ ತಿಂಗಳಲ್ಲಿ ಹುನಗುಂದ ಪಟ್ಟಣದಲ್ಲಿ ರಾಜ್ಯ ಮಟ್ಟದ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಖೋ ಖೋ ಅಶೋಸಿಯೇಶನ್‌ದ ಬಾಗಲಕೋಟ ಜಿಲ್ಲಾಧ್ಯಕ್ಷ ದೇವು ಡಂಬಳ ಹೇಳಿದರು. ಪಟ್ಟಣದ ಸರ್ಕಾರಿ ಕೇಂದ್ರ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ದೇಶೀಯ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಪುನಶ್ಚೇತನ ಗೊಳಿಸುವ ಉದ್ದೇಶ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಖೋ ಖೋ ಕ್ರೀಡಾಪಟುಗಳನ್ನು ಗುರುತಿಸಿ ಉತ್ತೇಜಿಸುವ ಸಲುವಾಗಿ ನಾನು ಮೊದಲ ಬಾರಿಗೆ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ ಬಾಗಲಕೋಟ ಜಿಲ್ಲಾಧ್ಯಕ್ಷನ್ನಾಗಿ ರಾಜ್ಯ ಮಟ್ಟದ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿಯನ್ನು ಹುನಗುಂದ ಪಟ್ಟಣದಲ್ಲಿ ಆಯೋಜಿಸುವ ಕಾರ್ಯವನ್ನು ಮಾಡಲಾಗುತ್ತಿದೆ.ಅದಕ್ಕೆ ಹುನಗುಂದ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಖೋ ಖೋ ಕ್ರೀಡಾಪಟುಗಳು ಟೋರ್ನಾಮೆಂಟ್‌ನಲ್ಲಿ ಭಾಗವಹಿಸಬೇಕು ಮತ್ತು ಎಲ್ಲ ಖೋ ಖೋ ಅಭಿಮಾನಿಗಳು ಸಹಕಾರ ನೀಡಬೇಕು ಎಂದರು.ಹಿರಿಯ ಖೋ ಖೋ ಆಟಗಾರ ಸಂಗಮೇಶ ಬಾದವಾಡಗಿ ಮಾತನಾಡಿ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ ಆದೇಶದಂತೆ ವಿಜಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಹುನಗುಂದ ಪಟ್ಟಣದಲ್ಲಿ ರಾಜ್ಯ ಮಟ್ಟದ ಸಬ್ ಜೂನಿಯರ್ ಖೋ ಖೋ ಟೋರ್ನಾಮೆಂಟ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು.ಈಗಾಗಲೇ ಜಮಖಂಡಿ,ಮಧೋಳ ಸೇರಿದಂತೆ ಬೇರೆ ಬೇರೆ ತಾಲೂಕಿನವರ ನಮಗೆ ಕೊಡಿ ನಾವು ಟೋನಾಮೆಂಟ್ ಮಾಡ್ತೀವಿ ಎಂದು ಒತ್ತಾಯಿಸುತ್ತಿದ್ದು.ಪ್ರಥಮ ಬಾರಿಗೆ ಖೋ ಖೋ ಅಸೋಸಿಯೇಷನ್ ರಚನೆಯಾದ ಬಳಿಕ ನಮ್ಮ ತಾಲೂಕಿನಲ್ಲಿಯೇ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವು ಮಾಲಗಿತ್ತಿ,ಹುನಗುಂದ ವಿಜಯ ಸ್ಪೋರ್ಟ್ಸ್ ಕ್ಲಬ್‌ದ ತಾಲೂಕ ಅಧ್ಯಕ್ಷ ಶರಣು ಬೆಲ್ಲದ, ಬಸವರಾಜ ಹುಲ್ಲಳ್ಳಿ, ಮುತ್ತಣ್ಣ ಹೇರೂರ, ಕುಮಾರ ತೋಪಲಕಟ್ಟಿ, ಪಿ.ಎಚ್.ಮೇದನಾಪೂರ, ಅಪ್ಪು ಆಲೂರ, ಮಲ್ಲು ಗೋನಾಳ, ಶರಣು ಬೆಣ್ಣಿ, ತಿಮ್ಮಣ್ಣ ವಾಲಿಕಾರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ.