ಅಬಕಾರಿ ಇಲಾಖೆಯಿಂದ ದಾಳಿ – 17.280 ಲೀಟರ್ ಮದ್ಯೆ ವಶ.
ಇಂಡಿ ಆ.30





ರೈಲು ನಿಲ್ದಾಣದಿಂದ ಹಲಸಂಗಿ ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ನೋಂದಣಿ ಸಂಖ್ಯಾ ಇಲ್ಲದೆ ಕಪ್ಪು ಬಣ್ಣದ ಟಿ.ವ್ಹಿ.ಎಸ್ ಎಕ್ಸ್ ಎಲ್ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದ ಯಲ್ಲಪ್ಪ ಶಟೆಪ್ಪಾ ಕ್ಷತ್ರಿ ಸಾ, ಅರ್ಜನಾಳ ಎಂಬುವರ ಮೇಲೆ ಖಚಿತ ಮಾಹಿತಿ ಯೊಂದಿಗೆ ದಾಳಿ ಮಾಡಿ ಒಟ್ಟು -17.280 ಲೀಟರ್ ಮದ್ಯೆ ಹಾಗೂ ದ್ವಿ ಚಕ್ರ ವಾಹನ ವಶಪಡಿಸಿ ಕೊಂಡರು. ಪ್ರಕರಣ ದಾಖಲಿಸಿ ಕೊಂಡು ಆರೋಪಿತನಾದ ಯಲ್ಲಪ್ಪ ಶಟೆಪ್ಪಾ ಕ್ಷತ್ರಿ ಅವರನ್ನು ಮಾನ್ಯ ನ್ಯಾಯಾಲಕ್ಕೆ ಹಾಜರ ಪಡಿಸಲಾಯಿತು ಎಂದು ರಾಹುಲ್ ಎಸ್ ನಾಯಕ ಅಬಕಾರಿ ನಿರಿಕ್ಷಕರು ಇಂಡಿ ವಲಯ ಅವರು ಮಾಧ್ಯಮದ ವರಿಗೆ ತಿಳಿಸಿದರು. ಸಿಬ್ಬಂದಿ ಗಳಾದ, ಶಿವಾನಂದ ಕೋಡತೆ, ಮಲ್ಲಪ್ಪ ಬಿರಾದಾರ, ಲಾಡ್ಲೆಮಶ್ಯಕ ಮಸಳಿ, ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ