ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರು – ಪ್ರಯಾಣಿಕರಿಗೆ ಅಪಾಯವಿಲ್ಲ.
ಸಾಲಿಗ್ರಾಮ ಸ.28





ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ಒಂದು ಕಾರು ರಸ್ತೆಯಿಂದ ಪಕ್ಕದ ಗದ್ದೆಗೆ ಉರುಳಿದ ಘಟನೆ ಇಂದು (ಶನಿವಾರ) ಸಂಜೆ ಸುಮಾರು 6:00 ಗಂಟೆಗೆ ನಡೆದಿದೆ.

ಮೂಡ್ ಹೋಬಳಿಯ ಕಾರ್ಕಡ-ಕಾವಡಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಕಾರು ದಿಢೀರನೆ ನಿಯಂತ್ರಣ ಕಳೆದುಕೊಂಡು ಗದ್ದೆಗೆ ಇಳಿದು ನಿಂತಿದೆ.


ಅದೃಷ್ಟವಶಾತ್, ಕಾರು ಗದ್ದೆಯಲ್ಲಿ ಮಗುಚದೆ ನೇರವಾಗಿ ನಿಂತಿದ್ದು, ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೂ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ತಿಳಿಸಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಸ್ಥಳೀಯರ ನೆರವಿನಿಂದ ಕಾರನ್ನು ಮೇಲೆತ್ತಲು ಪ್ರಯತ್ನಗಳು ನಡೆದಿವೆ.
ವರದಿ:ಆರತಿ.ಗಿಳಿಯಾರು.ಉಡುಪಿ