ಭಗವಂತನ ಸಾಕ್ಷಾತ್ಕಾರಕ್ಕೆ ವ್ಯಾಕುಲತೆಯೆ ಮೂಲ ಸೆಲೆ – ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ.
ಚಳ್ಳಕೆರೆ ಅ.28


ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತನಾದವನು ವ್ಯಾಕುಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ” ಭಾಗ-೨ರ ಗ್ರಂಥ ಪಾರಾಯಣ ಮಾಡುತ್ತಾ ಮಾತನಾಡುತ್ತಿದ್ದರು. ಮಗು ತಾಯಿಗಾಗಿ ವ್ಯಾಕುಲತೆ ಪಡುವಂತೆ ನಾವು ದೇವರಿಗಾಗಿ ಕಂಬನಿ ಸುರಿಸಬೇಕು. ಗುರುವೆ ಸಚ್ಚಿದಾನಂದನಾಗಿದ್ದು ಅವನ ಮಾತಿನಲ್ಲಿ ವಿಶ್ವಾಸ ವಿಟ್ಟು ಮುಂದುವರಿದರೆ ಭಗವಂತ ದೊರೆತು ಬಿಡುತ್ತಾನೆ ಎಂದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ , ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ ಶಾಂತಕುಮಾರ್, ಸುಧಾಮಣಿ, ವಿವಿಕ್ತ, ವೆಂಕಟಲಕ್ಷ್ಮೀ, ಡಾ, ಭೂಮಿಕಾ, ಯತೀಶ್.ಎಂ ಸಿದ್ದಾಪುರ, ಚೇತನ್, ಜಿ.ಯಶೋಧಾ ಪ್ರಕಾಶ್, ಋತಿಕ್ ಕುಮಾರ್, ಪುಷ್ಪಲತಾ, ಹುಜೇರ್ ಅಹಮದ್ ಭಾಗವಹಿಸಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.

