“ಮಗು ಮನ ಮನೆಯ ಅಂದವು”…..

ನನ್ನ ಮುದ್ದು ಕಂದ ನಿನ್ನ ನಗುವ ಚಂದ
ಆಟ ಬಲು ಅಂದ ತೊದಲು ನುಡಿ ಇಂಪು
ತಂದೆ ತಾಯಿಗೆ ನೀನೇ ಬೆಳಕು
ದೇಶ ನಾಡ ಕಿರ್ತಿಗೆ ಮೆರಗು
ಅಜ್ಜನ ಅಜ್ಜಿಯ ಹೇಗಲೇರಿ ಹರುಷದಿ
ನಲಿಯುವೆ
ಅಣ್ಣ ಅಕ್ಕ ತಮ್ಮತಂಗಿಯರ ಜೋತೆಯಾಡುವೆ
ಅಕ್ಕ ತಂಗಿಯರ ನಡುವೆ ಹಠ ಮಾಡುವೆ
ಬೇದ ಅರಿಯದೆ ನೆರೆ ಹೊರೆಯವರ ಕೂಗಿ
ಕರೆವೆ
ಚಿಲಿಪಿಲಿ ಹಕ್ಕಿಗಳ ನೋಡಿ ಕುಣಿವೆ
ಪಕ್ಕದ ಮಗು ಜೋತೆ ಹಾಡಿ ನಲಿಯುವೆ
ಪುಟ್ಟಿ ಪುಟ್ಟ ಹೆಜ್ಜೆಗೆ ಗೆಜ್ಜೆ ನಾದವು
ನಿತ್ಯ ಬಾಳಿನಲಿ ಬೆಳ್ಳಿಯ ಹೊಳಪು
ತಾಯಿಯ ಅಳಿಸಿ ನಗಸಿ ಕಿರಚುವೆ
ಮನೆ ಹೊರ ಒಳಗೆ ಓಡಿ ಆಡಿ ನಲಿಯುವೆ
ಮಗುವು ಸ್ನೇಹ ಬಾಳಲಿ ಖುಷಿ ಖುಷಿ ತರುವ
ಚಂದಿರ ನೋಡುತ ಊಟವ ಸವಿಯುವೆ
ದಿನ ದಿನವು ಅಮ್ಮನು ಹರುಷ ಪಡುವ
ಕಂದನ ನಗು ಅಳು ಮನೆಗೆಲ್ಲಾ
ಆನಂದೋತ್ಸವವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

