ಪ್ರೌಢ ಶಾಲೆಯ ವಿದ್ಯಾರ್ಥಿಗಳ ತಾಲೂಕ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತಾಲೂಕ ಮಟ್ಟದ ದಿಂದ – ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಶಿರಗುಪ್ಪಿ ಅ.31


ಜಮಖಂಡಿ ತಾಲೂಕಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತಾಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರ ತಂಡ, ಸತತ ಮೂರನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಒಂದು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗುತ್ತಾ ಇರುವ ಹೆಮ್ಮೆಯ ಶಾಲೆ, ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ 5+5 ಆಯ್ಕೆ ಆಗಿದ್ದಾರೆ. ಈ “ಗುರಿಯನ್ನು ಬೆನ್ನು ಹತ್ತುವ ಪ್ರಯತ್ನದಲ್ಲಿ ಮುದ್ದು ವಿದ್ಯಾರ್ಥಿಗಳು” ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಶುಭಾಶಯ ತಿಳಿಸುವರು.

ಶಾಲಾ ಮುಖ್ಯ ಗುರುಮಾತೆ ಶ್ರೀಮತಿ A.M ಅತ್ತಾರ, ದೈಹಿಕ ಶಿಕ್ಷಕರು ಶ್ರೀ M.A ಕಾಗವಾಡೆ, ಸಹ ಶಿಕ್ಷಕರ ಬಳಗ ಮತ್ತು S.D.M.C ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರಿನ ಹಿರಿಯರು ಮತ್ತು ಕ್ರೀಡಾ ಪ್ರೇಮಿಗಳು ಶುಭ ಹಾರೈಕೆಗಳು ಹಾರೈಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಿ.ಎಮ್ ತಳವಾರ ಜಮಖಂಡಿ
 
				
 
						