ಕೆ.ಎಂ ಮಧುಸೂದನ್ ರವರಿಗೆ ಇಂಟರ್ನ್ಯಾಷನಲ್ ಐಕಾನ್ – ಅವಾರ್ಡ್ ಪ್ರಶಸ್ತಿಯ ಪ್ರಧಾನ.
ಕೂಡ್ಲಿಗಿ ಏ.18

ಬೆಂಗಳೂರು ಉತ್ತರಹಳ್ಳಿಯಲ್ಲಿ ನಡೆದ ಟೆಲಿವಿಷನ್ ಕಲ್ಚರ್ ಮತ್ತು ಸ್ಪೋರ್ಟ್ಸ್ ಕ್ಲಬ್ ಹಾಗೂ ಅಕ್ಷರನಾದ ಸೋಶಿಯಲ್ ವೆಲ್ಫೇರ್ ಕ್ಲಬ್ ಕರ್ನಾಟಕ ವತಿಯಿಂದ ಆಯೋಜಿನೆ ಗೊಂಡಿದ್ದ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಉಪ ವಲಯ ಅರಣ್ಯ ಅಧಿಕಾರಿ ಕೆ.ಎಂ ಮಧುಸೂದನ್ ಅವರಿಗೆ ಪರಿಸರ ರಕ್ಷಣೆ ಕಾರ್ಯವನ್ನ ಗುರುತಿಸಿ ಐಫಾ ಅವಾರ್ಡ್ 2026 ನೇ. ವರ್ಷದ ಅಕ್ಷರನಾದ ಇಂಟರ್ನ್ಯಾಷನಲ್ ಐಕಾನ್ ಅವಾರ್ಡ್ ನೀಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾನಾ ಹೊಸಹಳ್ಳಿ ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

