ಪೂನಾ ಒಪ್ಪಂದದಿಂದ ಮತದಾನದ ಹಕ್ಕು ಕೊಟ್ಟವರು ಅಂಬೇಡ್ಕರ್’ – ಎಸ್.ದುರುಗೇಶ್.

ಕೂಡ್ಲಿಗಿ ಏ.18

“1932 ರ ಪೂನಾ ಒಪ್ಪಂದದಲ್ಲಿ ದಲಿತರಿಗೆ ಮೀಸಲು ಕ್ಷೇತ್ರ ಮತ್ತು ದುಪ್ಪಟ್ಟು ಮತದಾನದ ಹಕ್ಕು ಪಡೆಯಲು ಡಾ, ಬಿ.ಆರ್ ಅಂಬೇಡ್ಕರ್ ಹೋರಾಡಿದರು. ಇಂದು ನಾವು ಮತ ಹಾಕುತ್ತಿದ್ದೇವೆ ಎಂದರೆ ಅವರ ಕೊಡುಗೆ” ಎಂದು ದಲಿತ ಸಂಘರ್ಷ ಸಮಿತಿ ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ಹೇಳಿದರು.

ಐಗಳ ಮಲ್ಲಾಪುರದಲ್ಲಿ ಸೋಮವಾರ ನಡೆದ ಡಾ.ಅಂಬೇಡ್ಕರ್ 135 ನೇ. ಹಾಗೂ ಬಾಬು ಜಗಜೀವನ ರಾಮ್ 119 ನೇ. ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. “ಅಂಬೇಡ್ಕರ್ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಮೂಲಕ ಅಸ್ಪೃಶ್ಯತೆ ವಿರುದ್ಧ ಹೋರಾಡಿ, ಸಂವಿಧಾನದ 17 ನೇ. ವಿಧಿಯಿಂದ ಅಸ್ಪೃಶ್ಯತೆ ನಿಷೇಧಿಸಿದರು. ಬಾಬುಜೀ ಅವರು ಹಸಿರು ಕ್ರಾಂತಿಯ ಮೂಲಕ ದೇಶವನ್ನು ಆಹಾರ ಸ್ವಾವಲಂಬಿ ಮಾಡಿದರು. ಕನಿಷ್ಠ ವೇತನ ಕಾಯ್ದೆ, ಬೋನಸ್ ಕಾಯ್ದೆ ತಂದರು” ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿತಾಲೂಕು ಸಂಚಾಲಕ ಬಡೇಲಡಕು ದುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕರಾದ ತುಂಬರಗುದ್ದಿ ದುರುಗೇಶ್, ಕಂದಗಲ್ ಪರಶುರಾಮ್, ಟಿ.ಗಂಗಾಧರ್ ಹೊಸಹಳ್ಳಿ, ಸಿದ್ದಾಪುರ ಈಶ್ವರಪ್ಪ, ತಾಯಕನಹಳ್ಳಿ ಬಸವರಾಜ್, ಚೌಡಾಪುರ ಬಸವರಾಜ್, ಕಾನಾಮಡುಗು ಪಕೀರಪ್ಪ, ಮಾಳೆ ಹಳ್ಳಿ ಮಂಜಪ್ಪ, ಹೊಸಹಳ್ಳಿ ಕರಿಬಸಪ್ಪ, ಕೂಡ್ಲಿಗಿ ಅಜಯ್ ಕುಮಾರ್, ತಾಯಕನಹಳ್ಳಿ ಕೃಷ್ಣಪ್ಪ, ಜಿತೇಂದ್ರ ಹೆಚ್.ರಮೇಶ್, ಹುಡೇಂ ಮಂಜುನಾಥ್, ಹಿರೇಹೆಗ್ಡಾಳ್ ಫಕೀರಪ್ಪ, ಹೆಚ್.ಶಿವಣ್ಣ, ಎಂ.ಗಾಳೆಪ್ಪ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button