ಶ್ರೀಶಾರದಾದೇವಿಯವರ ಪರೋಪಕಾರದ ಗುಣ ಮಕ್ಕಳಿಗೆ ಆದರ್ಶವಾಗಬೇಕು – ಡಾ, ಭೂಮಿಕ.
ಚಳ್ಳಕೆರೆ ಜೂ.03

ಶ್ರೀಮಾತೆ ಶಾರದಾದೇವಿಯವರ ಜೀವನದಲ್ಲಿ ಅತ್ಯಂತ ಮುಖ್ಯವಾಗಿ ಕಂಡು ಬರುವ ಅವರ ಬಡವರ ಮೇಲಿನ ಪ್ರೀತಿ, ಪರೋಪಕಾರದ ಸದ್ಗುಣ ಇಂದಿನ ಮಕ್ಕಳಿಗೆ ಆದರ್ಶಪ್ರಾಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶಾರದಾ ಮಾತೆಯವರ ಜೀವನದ ಕಥೆ” ಯನ್ನು ಕುರಿತು ಮಾತನಾಡಿದರು.

ಶಿಬಿರದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಮಕ್ಕಳಿಂದ ಧ್ಯಾನ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ, ಅಮ್ಮಾ ಶಾರದಾಮಾತೆ ಹೇಳುವಿಕೆ, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು.
ತರಗತಿಯಲ್ಲಿ ಮಾತಾಜೀ ತ್ಯಾಗಮಯೀ, ವಿನತಿ, ಲಕ್ಷ್ಮೀ, ಚರಣ್ಯ, ಲಹರಿ, ಹೃತ್ವಿಕ್, ಯಶಸ್, ಜಸ್ವಿತ್, ಸಂತೋಷ್, ಮಾನ್ಯ ಇದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

