ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26 ನೇ. ಸಾಲಿನ ದಾಖಲಾತಿ ಆಂದೋಲನ – ಶಾಲೆ ಪ್ರಾರಂಭೋತ್ಸವ ಜರುಗಿತು.

ಹೊಸ ತಾರಾಪುರ ಜೂ.03

ಆಲಮೇಲ ತಾಲೂಕಿನ ತಾರಾಪೂರ ಸರಕಾರಿ ಹಿರಿಯ ಪ್ರಾಥಮಿಕ ಈ ಶಾಲೆಯಲ್ಲಿ ದಿನಾಂಕ 1/6/2026 ರಂದು ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ. ಪುಷ್ವಾರ್ಚನೆ ನೀಡುವುದರ ಮೂಲಕ ಮಕ್ಕಳಿಗೆ ಸ್ವಾಗತಿಸಿದ ಮುಖ್ಯ ಗುರುಗಳು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರು ಸ್ವಾಗತಿಸಿ ಕೊಂಡರು.

ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದ ಮೊದಲಿಗೆ ಶ್ರೀ ಗಣೇಶನ ಭಕ್ತಿ ಗೀತೆಯನ್ನು ಹಾಡುವ ಮೂಲಕ ಎಲ್ಲರ ಮೇಲೆ ಗಣೇಶನ ಕೃಪೆ ಇರಲಿ ಎಂದು ಮನದಲ್ಲಿ ಸಂಕಲ್ಪ ಮಾಡಿ ಕೊಂಡರು. ಮುಂದೆ ಬರುವ ದಿನಗಳಲ್ಲಿ ಎಲ್ಲವೂ ಸುಗಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಗುರುಗಳಾದ ಎಂ.ಜಿ ಪೂಜಾರಿ. ಡಿ.ವಿ ಡೊಳ್ಳಿ ಶಿಕ್ಷಕರು ಎಮ್.ಬಿ ಬೋವಿ ಶಿಕ್ಷಕರು. ಅತಿಥಿ ಶಿಕ್ಷಕರಾದ ಸುವರ್ಣ ಇಟನೂರ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಯಮನಪ್ಪ ಹಾದಿಮನಿ . ಅವರು ಸ್ವಾಗತ ಕೋರಿ ಮಕ್ಕಳಿಗೆ ಅಭಿನಂದನೆ ಹೇಳಿದರು.

ಈ ಹಿಂದಿನ ರಜೆ ತಿಂಗಳನ ದಿನಗಳಲ್ಲಿ ಮಕ್ಕಳ ನಡೆ ಆಟದ ಕಡೆ ಇತ್ತು ಇನ್ನೂ ಮಕ್ಕಳು ನಡೆ ಶಾಲೆಯ ಕಡೆ ಬರಲಿ ಎಂದು ಸಂತೋಷದಿಂದ ಮಕ್ಕಳಿಗೆ ಬರಮಾಡಿ ಕೊಂಡರು.

ಮಕ್ಕಳು ಶಿಕ್ಷಣವನ್ನು ಉತ್ತಮವಾಗಿ ಕಲಿತು ಒಳ್ಳೆಯ ವಿದ್ಯಾರ್ಥಿಗಳಾಗಿ ಎಂದು ಶುಭ ನುಡಿದರು ಹಾಗೂ ಇದೆ ಸಮಯದಲ್ಲಿ. ಈಗಿರುವ ಸೌಲಭ್ಯಗಳು ಲಭ್ಯವಿರುವ ಪೌಷ್ಟಿಕೌಂಶದ ಬಾಳೆಹಣ್ಣು ತತ್ತಿ ಬಿಸಿ ಊಟ ಸಮವಸ್ತ್ರ ಪಾಠಿ ಪುಸ್ತಕಗಳು ಉಚಿತವಾಗಿ ಕೊಡಲಾಗುತ್ತದೆ ಇದರ ಜೊತೆಗೆ ಉತ್ತಮ ಶಿಕ್ಷಣ ನೀಡಲಾಗುತ್ತದೆ ಎಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹೇಳುತ್ತಾ ಶಾಲೆಯ ಪ್ರಾರಂಭೋತ್ಸವದಲ್ಲಿ ಮುಖ್ಯ ಗುರುಗಳಾದ ಎಂ.ಜಿ ಪೂಜಾರಿ ಹೇಳಿದರು.

ನಂತರ ಡಿ.ವಿ ಡೊಳ್ಳಿ ಶಿಕ್ಷಕರು ಎಲ್ಲ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸ್ವಾಗತ ಕೋರಿ ಶುಭಾಶಯಗಳು ಹೇಳಿ. ಮಕ್ಕಳು ತಪ್ಪದೇ ದಿನಾಲು ಶಾಲೆಗೆ ಬರಬೇಕು ಶಿಸ್ತು & ಬದ್ಧತೆಯಿಂದ ಬಂದು ವಿದ್ಯಾಭ್ಯಾಸ ಕಲಿಯಬೇಕು ಶಾಲೆಯಲ್ಲಿ ಎಲ್ಲಾ ಅನುಕೂಲ ಇರುತ್ತದೆ ಎಂದು ಎಮ್.ಬಿ ಭುವಿ ಶಿಕ್ಷಕರು ಹೇಳಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button