ಕೆಂಪೇಗೌಡ ಜಯಂತಿ ಆಚರಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ ಪ್ರಕರಣ – ಆಲಿಸಿದ ನಿಕಟ ಪೂರ್ವ ಮುಖ್ಯ ಮಂತ್ರಿ ಸಿದ್ದರಾಮಯ್ಯ.
ಚಿಕ್ಕಬಳ್ಳಾಪುರ ಜು.02

ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಆಚರಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ ಘಟನೆಗೆ ಸಂಬಂಧಿಸಿದಂತೆ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಇಂದು ಚಿಕ್ಕಬಳ್ಳಾಪುರ ಶಾಸಕರಾದ ಶ್ರೀ ಪ್ರದೀಪ್ ಈಶ್ವರ್ ಹಾಗೂ ಹಿಂದುಳಿದ ವರ್ಗದ ನಾಯಕರೊಂದಿಗೆ ಭೇಟಿ ಮಾಡಿ, ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಲಾಯಿತು.
ಸ್ಥಳದಲ್ಲೇ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ದೂರವಾಣಿ ಕರೆ ಮಾಡಿದ ಶ್ರೀ ಸಿದ್ದರಾಮಯ್ಯನವರು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ, ಪೊಲೀಸರ ಸಮ್ಮುಖದಲ್ಲೇ ಶಾಸಕರಿಗೆ ಈ ರೀತಿ ಆಗಿರುವುದು ಅಕ್ಷಮ್ಯ. ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿ ಧೈರ್ಯ ತುಂಬಿದರು.
ಇದೊಂದು ಆಕ್ಷಮ್ಯ ಅಪರಾಧ. ಹಿಂದುಳಿದ ವರ್ಗದ ನಾಯಕರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವರ್ಧ ಮಾನಕ್ಕೆ ಬರುತ್ತಿರುವುದನ್ನು ಸಹಿಸದ ಕಿಡಿಗೇಡಿ ಪಕ್ಷಗಳು ಹೂಡಿರುವ ಕುತಂತ್ರ. ಜನರೇ ಆರಿಸಿ ಕಳುಹಿಸಿದ ನಾಯಕನನ್ನು, ಸಮಾರಂಭದ ಜನ ಜಂಗುಳಿಯ ಮಧ್ಯೆ ನಿಂತು ಮರೆಯಿಂದಲೇ ಚಪ್ಪಲಿ ಎಸೆಯುವುದು ಹತಾಶೆ, ವಿದ್ರಾವಕ ಹೃದಯದವರು ಮಾಡುವ ಕೃತ್ಯ. ಇದು ಎರಡೂ ಪಕ್ಷಗಳು ಒಟ್ಟಿಗೆ ಸೇರಿ ಸಂವಿಧಾನಕ್ಕೆ ಮಾಡಿರುವ ಘೋರ ಅವಮಾನ. ನಮ್ಮ ಪ್ರಜಾಪ್ರಭುತ್ವದಲ್ಲಿ ಇಂತ ಕುಕೃತ್ಯಗಳಿಗೆ ಯಾವುದೇ ಜಾಗವಾಗಲಿ, ಸಮರ್ಥನೆಯಾಗಲಿ ಇಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸಂವಿಧಾನ ಬಗ್ಗೆಯಾಗಲಿ, ಡಾ, ಬಿ.ಆರ್ ಅಂಬೇಡ್ಕರ್ ಬಗ್ಗೆಯಾಗಲಿ ಕಿಂಚಿತ್ತೂ ಗೌರವವಿಲ್ಲ. ಅವರ ಉದ್ದೇಶ, ನಾಡಿನ ಓ.ಬಿ.ಸಿ ನಾಯಕರನ್ನು ಚಿವುಟುದು. ಹಾಗಾಗಿ, ಇಂಥ ಹೇಯ ಕೃತ್ಯಗಳಿಗೆ ಕೈ ಹಾಕುತ್ತಾರೆ. ಪ್ರದೀಪ್ ಈಶ್ವರ್ ಸತ್ಯ, ನ್ಯಾಯ, ನೀತಿ, ಸಾಮಾಜಿಕ ನ್ಯಾಯದ ಅಡಿ ಪಾಯದಲ್ಲಿ ಬೆಳೆದು ಜನ ನಾಯಕರಾಗಿದ್ದಾರೆ. ನಾವೆಲ್ಲಾ ಅವರೊಂದಿಗೆ ಸೇರಿ ಭಿನ್ನಮತವನ್ನು ಈ ರೀತಿಯ ಹೇಯ ಕೃತ್ಯಗಳ ಮೂಲಕ ಹತ್ತಿಕ್ಕಲು ಹೊರಟವರಿಗೆ ಕಾನೂನೂನಿನ ಮೂಲಕ ತಕ್ಕಪಾಠ ಕಲಿಸ ಬೇಕಾದ ತುರ್ತು ಇದೆ.
ಪ್ರದೀಪ್ ಈಶ್ವರ್ ಅವರು ಎದೆಗುಂದ ಬೇಕಿಲ್ಲ. ದುಷ್ಕರ್ಮಿಗಳ ಹೆಡೆಮುರಿ ಕಟ್ಟಲು ಅವರ ಪರವಾಗಿ ನಮ್ಮ ಕಾಂಗ್ರೆಸ್ ಸರ್ಕಾರ, ಪಕ್ಷ, ರಾಜ್ಯದ ಇಡೀ ಓ.ಬಿ.ಸಿ ಸಮುದಾಯದಳು ಹಾಗೂ ಜನತೆ ಅವರ ಬೆನ್ನಿಗೆ ಒಂದಾಗಿ ನಿಂತಿದೆ.
ಈ ಭೇಟಿಯ ಸಂದರ್ಭದಲ್ಲಿ ಮಾನ್ಯ ನಗರಾಭಿವೃದ್ಧಿ ಸಚಿವರಾದ ಡಾ, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಶ್ರೀ ಮಧು ಬಂಗಾರಪ್ಪ, ಓ.ಬಿ.ಸಿ ಸಮುದಾಯದ ಮುಖಂಡರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

