ಶಾರದಾದೇವಿಯವರ ವ್ಯವಹಾರ – ಪ್ರಜ್ಞೆ ವಿಶಿಷ್ಟವಾದದ್ದು.

ಚಳ್ಳಕೆರೆ ಜು.02

ಶ್ರೀಮಾತೆ ಶಾರದಾದೇವಿಯವರ ಜೀವನದಲ್ಲಿ ವ್ಯಕ್ತವಾಗುವ ಅವರ ವ್ಯಾವಹಾರಿಕ ಪ್ರಜ್ಞೆ ಮತ್ತು ಜ್ಞಾನ ಅತ್ಯಂತ ವಿಶಿಷ್ಟವಾದದ್ದು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಮಾಡುತ್ತ “ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಕರ್ಮಯೋಗದ ಶ್ಲೋಕಗಳ ಕಲಿಕಾ ತರಗತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶಾಂತಮ್ಮ, ಗೀತಾಲಕ್ಷ್ಮೀ, ಶಾರದಮ್ಮ, ನಾಗರತ್ನಮ್ಮ, ಸುಧಾಮಣಿ, ಭಾಗ್ಯಲಕ್ಷ್ಮೀ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಯಮ್ಮ, ಜಯಶೀಲಮ್ಮ, ವೀರಮ್ಮ, ದ್ರಾಕ್ಷಾಯಣಿ, ಶೈಲಜಾ, ಕೃಷ್ಣವೇಣಿ, ವಿಜಯಲಕ್ಷ್ಮೀ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button