🚨🚨ಬ್ರೇಕಿಂಗ್ ನ್ಯೂಸ್, ಉಡುಪಿಯಲ್ಲಿ ಅಪೂರ್ವ ಜುಲೈ 1 ರ ದಿನಾಚರಣೆ – ಸಮಾಜದ ನಾಲ್ಕು ಶಕ್ತಿಗಳಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್‌ನಿಂದ ಭಾವಪೂರ್ಣ ಗೌರವ ಸಮರ್ಪಣೆ!🚨🚨

ಉಡುಪಿ ಜು.02

ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ “ರಮೇಶ್ ಕಾಂಚನ್” ಅವರ ವಿಭಿನ್ನ ಚಿಂತನೆ ಹಾಗೂ ದೂರದರ್ಶಿತ್ವದ ನೇತೃತ್ವದಲ್ಲಿ ಇಂದು (ಜುಲೈ 1) ಸಮಾಜದ ವಿವಿಧ ರಂಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಾಲ್ವರು ಶ್ರೇಷ್ಠ ಸಾಧಕರನ್ನು ಅವರ ಕಾರ್ಯ ಕ್ಷೇತ್ರದಲ್ಲೇ ಗುರುತಿಸಿ, ಶಾಲು ಹೊದಿಸಿ, ಹೂಮಾಲೆ ಮತ್ತು ಸ್ಮರಣಿಕೆ ನೀಡಿ ಅತ್ಯಂತ ಅದ್ಧೂರಿಯಾಗಿ ಗೌರವಿಸಲಾಯಿತು! 🎖️✨

🩺📊 ಒಂದೇ ವೇದಿಕೆಯಲ್ಲಿ ಸಮಾಜದ ನಾಲ್ಕು ವಿಭಿನ್ನ ಧ್ರುವಗಳ ಸಮಾಗಮ! 📰✉️

ಜುಲೈ 1 ರಂದು ದೇಶಾದ್ಯಂತ ಆಚರಿಸಲಾಗುವ ರಾಷ್ಟ್ರೀಯ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನಾಚರಣೆ ಹಾಗೂ ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನದ ಅಂಗವಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಈ ಕೆಳಗಿನ ಗಣ್ಯರನ್ನು ಸನ್ಮಾನಿಸಲಾಯಿತು.

🩺 “ಡಾ, ಎಚ್.ಅಶೋಕ್” – ಜಿಲ್ಲಾ ಶಸ್ತ್ರ ಚಿಕಿತ್ಸಕರು, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ (ಆರೋಗ್ಯ ಕ್ಷೇತ್ರದ ನಿಸ್ವಾರ್ಥ ಸೇವೆಗಾಗಿ)

📊 “ಯು.ಬಿ ಅಜಿತ್ ಕುಮಾರ್” – ಹಿರಿಯ ಲೆಕ್ಕ ಪರಿಶೋಧಕರು (ಆರ್ಥಿಕ ಶಿಸ್ತಿನ ದಿಕ್ಸೂಚಿ)

📰 “ಸುಬ್ರಹ್ಮಣ್ಯ ಜಿ. ಕುರ್ಯ” – ಅಧ್ಯಕ್ಷರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಮಾಧ್ಯಮ ರಂಗದ ದಿಗ್ಗಜ)

✉️ “ನಾಗರಾಜ್ ಶೆಟ್ಟಿಗಾರ್” – ಕರ್ತವ್ಯ ನಿಷ್ಠ ಅಂಚೆ ಪೇದೆ (ಮನೆ ಮನ ತಲುಪಿದ ಜನ ಸೇವಕ)

🎙️ “ದ್ವೇಷವಿಲ್ಲದ ಮೂರು ದಶಕಗಳ ಪತ್ರಿಕೋದ್ಯಮ ನನ್ನ ಬದುಕಿನ ತೃಪ್ತಿ” – ಸುಬ್ರಹ್ಮಣ್ಯ ಜಿ. ಕುರ್ಯ 💥

🔥 ಸನ್ಮಾನ ಸ್ವೀಕರಿಸಿ ಅತ್ಯಂತ ಮಾರ್ಮಿಕ ಹಾಗೂ ಚಿಂತನ ಶೀಲ ಮಾತುಗಳನ್ನಾಡಿದ ಹಿರಿಯ ಪತ್ರಕರ್ತ “ಸುಬ್ರಹ್ಮಣ್ಯ ಜಿ.ಕುರ್ಯ” ಅವರು ಇಂದಿನ ಮಾಧ್ಯಮ ರಂಗಕ್ಕೆ ಅತ್ಯಗತ್ಯವಾದ ಸಂದೇಶ ನೀಡಿದರು.

📝 “ಕಳೆದ 3 ದಶಕಗಳಿಂದ ಪತ್ರಿಕೋದ್ಯಮದಲ್ಲಿ ಯಾವುದೇ ಪಕ್ಷಾತೀತವಾಗಿ, ದ್ವೇಷದ ಮನೋಭಾವವನ್ನು ಇಟ್ಟು ಕೊಳ್ಳದೇ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಪರಮ ತೃಪ್ತಿ ನನಗಿದೆ. ಇಂದಿನ ಸಾಮಾಜಿಕ ಜಾಲ ತಾಣಗಳ (Social Media) ವಿಪರೀತ ಅಬ್ಬರ ಮತ್ತು ಭರಾಟೆಯ ನಡುವೆಯೂ, ದಾಖಲೆಯುಕ್ತ ಹಾಗೂ ಪ್ರಬುದ್ಧ ವರದಿಗಾರಿಕೆಯನ್ನು ನಡೆಸಿದರೆ ಮಾತ್ರ ಪತ್ರಿಕೋದ್ಯಮವು ತನ್ನ ನೈಜ ಮಹತ್ವವನ್ನು ಉಳಿಸಿ ಕೊಳ್ಳಲು ಸಾಧ್ಯವಿದೆ. ಪತ್ರಕರ್ತರು ಕೇವಲ ವರದಿಗೆ ಸೀಮಿತವಾಗದೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿ ಕೊಳ್ಳಬೇಕು.

“ಇದೇ ವೇಳೆ, ಪತ್ರಿಕಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ತಮ್ಮನ್ನು ಗುರುತಿಸಿ ಗೌರವಿಸಿದಕ್ಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಅವರು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.

🙏 👥 ಸೌಹಾರ್ದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಪ್ರಮುಖ ನಾಯಕರು:-

ಈ ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾದ ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಯುವರಾಜ್ ಪುತ್ತೂರು, ಸಂಧ್ಯಾ ತಿಲಕ್‌ರಾಜ್, ಮಮತಾ ಶೆಟ್ಟಿ, ಭರತ್ ಕುಮಾರ್, ಸಂಜಯ್ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ, ಲ್ಯಾನ್ಸಿ ಡಿ’ಸೋಜಾ, ಯಾದವ್ ಆಚಾರ್ಯ, ಅರ್ಚನಾ ದೇವಾಡಿಗ ಹಾಗೂ ಉದ್ಯಮಿ ಸಚಿನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು. 🤝✨

✍️ ವರದಿ:ಆರತಿ.ಗಿಳಿಯಾರು.ಉಡುಪಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button