ಪಟ್ಟಣದಲ್ಲಿ ಕಾರ ಹುಣ್ಣಿಮೆಯ ಸಡಗರ ಸಂಭ್ರಮದಿಂದ – ಆಚರಿಸಿದ ಗ್ರಾಮಸ್ಥರು.
ಆಲಮೇಲ ಜು.02

ವಿಜಯಪುರ ಜಿಲ್ಲೆಯ ಅಲಮೇಲ ಪಟ್ಟಣದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಕಾರ ಹುಣ್ಣಿಮೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಪಟ್ಟಣದ ದೇಶಮುಖ ಮತ್ತು ದೇಶಪಾಂಡೆ ಮನೆತನದವರ ಬಂಡಿ ಓಡಿಸಿ ಕಾರ ಹುಣ್ಣಿಮೆ ಕರಿ ಹರಿಯುವ ಈ ಪದ್ಧತಿ ಹಿಂದಿನಿಂದಲೂ ನಡೆದು ಕೊಂಡು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳಿದರು.
ಕಾರು ಹುಣ್ಣಿಮೆ ದಿನ ಬೆಳಗ್ಗೆ ಹಳ್ಳಕ್ಕೆ ತೆರಳಿ ಎತ್ತು ಮತ್ತು ಬಂಡಿಯನ್ನು ತೊಳೆದು ಬೇವಿನ ತಪ್ಪಲಗಳಿಂದ ಸಿಂಗಾರ ಮಾಡಿ ನಂತರ ದೇಶಮುಖರ ಸಮ್ಮುಖದಲ್ಲಿ ಸಂಜೆ ಎತ್ತಿನ ಬಂಡಿಯ ಒಟ. ಕರ ಸಂಪ್ರದಾಯ ಪ್ರಕಾರ ದೇಶಪಾಂಡೆ ಮತ್ತು ಮನೆತನದ ಲಕ್ಷ್ಮಿ ಬಂಡಿಗಳು ಕರಿ ಹರಿದರು.
ಇದುಕ್ಕೂ ಪೂರ್ವದಲ್ಲಿ ಹರಿಯುವ ಓಟದಲ್ಲಿ ಪಾಲ್ಗೊಳ್ಳುವ ಇತರ ಬಂಡಿ ಮತ್ತು ಎತ್ತುಗಳಿಗೆ ಅಲಂಕರಿಸಿ ಬಳಿಕ ಬಂಡಿಗಳನ್ನು ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಗಾಲಿಸಾಬ ದರ್ಗದ ಎದುರು ಎರಡು ಬಂಡಿಗಳು ದರ್ಗದ ಮುಂದೆ ಐದು ಸುತ್ತು ಓಡಿಸಿದ ನಂತರ ಮನೆಗೆ ತೆರುಳುವಾಗ ದೇಶಮುಖರ ಲಕ್ಷ್ಮಿ ಬಂಡಿಯಲ್ಲಿ ಇರುವವರು ದಕ್ಷಿಣ ದಿಕ್ಕಿನಲ್ಲಿರುವ ದೇವರ ಅಗಿಸಿಯಲ್ಲಿ ಕರಿ ಹರಿಯುತ್ತಾರೆ. ದೇಶಮುಖರ ಬಂಡಿಗೆ. ಶ್ರೀಮಂತ ಲಾವಟೆ ಎತ್ತು ಕಟ್ಟುತ್ತಾರೆ. ಬಂಡಿಯಲ್ಲಿ ಬಸವರಾಜ ಹೊಸಮನಿ ಇರುತ್ತಾರೆ ಅದರಂತೆ ದೇಶಪಾಂಡೆ ಅವರ ಬಂಡಿಗೆ ಮಹಿಬೂಬ ಸೌದಾಗಾರ ಎತ್ತು ಕಟ್ಟುತ್ತಾರೆ. ಬಂಡಿಯಲ್ಲಿ ಈರಣ್ಣ.ಗುರಕಾರ ನಿಲ್ಲುತ್ತಾರೆ.

ದೇಶಮುಖರ ಬಂಡಿಗೆ ಗ್ರಾಮದ ವಾಲಿಕಾರು ರಕ್ಷಣೆ ನೀಡುತ್ತಾರೆ. ಕಾರ ಹುಣ್ಣಿಮೆಯ ಕರಿ ವೀಕ್ಷಿಸಲು ಸುತ್ತ ಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಕಂಡು ಬಂದಿತು. ಆಲಮೇಲ ಠಾಣೆಯ ಪಿಎಸ್ಐ ಅರವಿಂದ್ರ ಅಂಗಡಿ ಹಾಗೂ ಸಿಬ್ಬಂದಿ ವರ್ಗ ಸೂಕ್ತ ಬಂದು ಬಸ್ತ್ ನೀಡಿದರು.
ಪ್ರಭು ವಾಲಿಕಾರ. ಬಿ ಆರ್ ಎಂಟಮನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು. ಅಶೋಕ್ ಕೋಳಾರಿ. ದೇವಪ್ಪ ಗುಣಾರಿ. ಗೋಲ್ಲಾಳ ಉಪ್ಪಿನ. ಬಸವರಾಜ ತೆಲ್ಲೂರ. ಸುಭಾಷ್ ಸಾಲಕಿ ಯಲ್ಲಪ್ಪ ಬುರುಡೆ . ಬಾಬು, ಕೊತ್ತಂಬರಿ ಗುಂಡು ಮೇಲಿನಮನಿ. ಸೋಮನಾಥ ಮೇಲಿನಮನಿ ಹಾಗೂ ಆಲಮೇಲ ಪಟ್ಟಣದ ಎಲ್ಲಾ ಸಮಾಜದ ಹಿರಿಯರು ಯುವಕರು ಮಹಿಳೆಯರು ಭಾಗವಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

