ನೀರಿಗಾಗಿ ಹಾಹಾಕಾರ ಸಾರ್ವಜನಿಕರು ಹಣ ಸಂಗ್ರಹಿಸಿ – ಪೈಪ್ ಲೈನ್ ದುರಸ್ತಿ ಮಾಡಿದ್ದಾರೆ.
ಹಾಲಾಪುರ ಜು.15

ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮ ಪಂಚಾಯಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲದಾಗಿದೆ. ಕುಡಿಯುವ ನೀರಿಗಾಗಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾ, ತಾಲೂಕು ಪಂಚಾಯಿತಿಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಸಭೆಗಳ ಮೇಲೆ ಸಭೆ ಮಾಡಿದರೂ ಅಧಿಕಾರಿಗಳ ಎಡುವಟ್ಟು ಲೋಪ ದೋಷದಿಂದ ನೀರಿನ ಭವಣೆ ಹೇಳುತ್ತಿರದಾಗಿದೆ. ಕುಡಿಯುವ ನೀರಿಗಾಗಿ ಸರ್ಕಾರ ಕೋಟಿ ಕೋಟಿ ಹಣ ಮಿಸಲಿಟ್ಟರು ಅದು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಲೂಟಿ ಸೀಮಿತವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಹಾಹಾಕಾರ ಹೇಳತೀರದು ಕಳೆದ ಮೂರು ದಿನಗಳಿಂದ ಇಲ್ಲಿ ಕುಡಿಯುವ ನೀರಿನ ಪೈಪುಗಳ ದುರಸ್ತಿಯಿಂದ ಶುದ್ಧ ಕುಡಿಯುವ ನೀರು, ದಿನ ಬಳಕೆ ನೀರು, ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ನೀರು ಇಲ್ಲದಾಗಿದೆ. ಇನ್ನಿತರ ನೀರಿನ ಸಮಸ್ಯೆಯಿಂದ ಜನರು ಬೇಸತ್ತು ಹೋಗುತ್ತಿದ್ದು ಸಮಸ್ಯೆ ಹೇಳುತ್ತಿರದಾಗಿದೆ.
ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಿಬ್ಬಂದಿಯವರು ಪೈಪ್ ದುರಸ್ತಿ ಮಾಡಲು ಸಾಮಾನುಗಳಿಲ್ಲ, ಇಲ್ಲಿಯ ವಾಟರ್ ಮ್ಯಾನ್ ವರ್ಷವಾದರೂ ವೇತನ ಇಲ್ಲ ಎಂದು ಗೋಳಾಟ ತೋಡಿಕೊಂಡರು. ಅದಕ್ಕೆ ಜನರೇ ಸೇರಿ ತಲಾಪಟ್ಟಿ ಸಂಗ್ರಹ ಮಾಡಿ ಕುಡಿಯುವ ನೀರಿನ ಪೈಪೈನ್ ದುರಸ್ತಿ ಮಾಡಿದ್ದಾರೆ.

ನಮ್ಮ ಹಾಲಾಪೂರ ನೀರು ಬೇರೆ ಬೇರೆ ಊರುಗಳಿಗೆ ಹೋಗುತ್ತವೆ. ಆದರೆ ಇಂದು ನಮ್ಮ ಊರಿಗೆ ನೀರೇ ಇಲ್ಲದಾಗಿದೆ. ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಕ್ಯಾರೆ ಎನ್ನದೆ ಇಲ್ಲಿಯ ಗ್ರಾಮ ಪಂಚಾಯಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಸಾರ್ವಜನಿಕರು ಗ್ರಾಮ ಪಂಚಾಯತಿ ಅಧಿಕಾರಿಗಳ ವರ್ತನೆಗೆ ಹಿಡಿ ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
