ನಾಡ ಹಬ್ಬ ಜಂಬು ಸವಾರಿ ಪ್ರಾರಂಭಿಸಿದ ವೀರ ಕಂಪಿಲರಾಯನ – ವಂಶಸ್ಥರಿಗೆ ಗೌರವ ನೀಡಿ.

ಮಾನ್ವಿ ಜು.15

ಕ್ರಿ.ಶೆ.ಕೆ 1296 ಆಸು ಪಾಸಿನಲ್ಲಿ ಬೇಡರ ಸಮುದಾಯದ ಪೂವಲ ಬೆಡಗಿನ ವಂಶಸ್ಥರಾದ ವೀರ ಕಂಪಿಲರಾಯನ ಕಾಲದಲ್ಲಿ ಆರಂಭವಾದ ಹೇಮಗುಡ್ಡದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯನ್ನು ಅಂಬಾರಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಇವರ ಸಂಸ್ಥಾನ ದೆಹಲಿ ಸುಲ್ತಾನರಿಂದ ದಾಳಿಯಿಂದ ಪತನವಾದ ಮೇಲೆ ಹಿರಿಯರ ಆಸೆಯಂತೆ ಕಂಪಿಲ್ಲ ರಾಯನ ಮೊಮ್ಮಕ್ಕಳಾದ ಹಕ್ಕ ಬುಕ್ಕ ನಾಯಕರು ಹಂಪಿ ಸಾಮ್ರಾಜ್ಯ ಸ್ಥಾಪನೆ ಮಾಡಿ ಸುಮಾರು 250 ವರ್ಷಗಳ ಕಾಲ ವಿಜೃಂಭಣೆಯಿಂದ ವಿಜಯದಶಮಿಯನ್ನು ನಡೆಸಿ ಕೊಟ್ಟ ಗೌರವ ಈ ವಂಶಕ್ಕೆ ಸಲ್ಲುತ್ತದೆ.

ಕಾರ್ಗಳ್ಳಿ ಮಾರಣ್ಣ ನಾಯಕ ಮೈಸೂರು ಭಾಗದಲ್ಲಿ 1399 ಕ್ಕಿಂತ ಮುಂಚೆ ಮೈಸೂರು ಪ್ರಾಂತ್ಯವು ವಿಜಯನಗರ ಸಾಮ್ರಾಜ್ಯದ ಆಧೀನದಲ್ಲಿತ್ತು ಆಗ ಸ್ಥಳೀಯ ಪಾಳಗಾರರಿಗೆ ಆಡಳಿತದ ಹೊಣೆ ಹೊತ್ತಿದ್ದರು.

ಕಾರ್ಗಳ್ಳಿ ಮಾರಣ್ಣ ನಾಯಕ ಒಬ್ಬ ಪ್ರಬಲ ಪಾಳೆಗಾರರಾಗಿದ್ದರು ಒಡೆಯರಿಕ್ಕಿಂತ ಮುಂಚೆ ರಾಜ್ಯಭಾರ ಮಾಡಿದವರು ನಮ್ಮ ಮಾರಣ್ಣ ನಾಯಕರು.

ಹೀಗಾಗಿ ಜಂಬೂ ಸವಾರಿ ಪ್ರಾರಂಭ ಮಾಡಿದ್ದು ಕಂಪಿಲರಾಯನ ವಂಶಸ್ಥರು ಹಾಗೆ ಮೈಸೂರು ಪ್ರಾಂತ್ಯವನ್ನು ಆಳಿದವರು ಮಾರಣ್ಣ ನಾಯಕರು ಈ ಒಂದು ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಇಂಥ ಮಹಾನ್ ನಾಯಕರ ವಂಶಸ್ಥರನ್ನು ಜಂಬೂ ಸವಾರಿ ನಡೆಯುವ ಸಮಯದಲ್ಲಿ ಸರ್ಕಾರದಿಂದ ಅಹ್ವಾನ ನೀಡಿ ಗೌರವ ಸನ್ಮಾನ ಮಾಡಬೇಕು ಹಾಗೆ ಇವರ ಭಾವ ಚಿತ್ರಗಳನ್ನು ಅರಮನೆಯಲ್ಲಿ ಪ್ರದರ್ಶನಕ್ಕೆ ಬೇಕೆಂದು ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯಾಧ್ಯಕ್ಷರಾದ ಅಂಬಣ್ಣ ನಾಯಕ ಗುಜ್ಜಲ್ ಹಾಗೂ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಿ ಜಿಲ್ಲಾಧ್ಯಕ್ಷರಾದ ರಾಮಣ್ಣ ನಾಯಕ ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಮಾನ್ವಿ ಯ ತಹಸಿಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ವೆಂಕಟೇಶ್ ನಾಯಕ ನಾಯ್ಡು ನಾಯಕ ಕೊಂಡಯ್ಯ ನಾಯಕ ಆಂಜನೇಯ ನಸಲಾಪುರ ಅಯ್ಯಪ್ಪ ನಾಯಕ ನಲಗಂದಿನ್ನಿ ಜೆಲ್ಲಿ ಆಂಜನೇಯ್ಯ ನೀರಮಾನ್ವಿ ಜೆಲ್ಲಿ ಭೀಮರಾಯ ಜೆಲ್ಲಿ ಗೊಟ್ಟ ಹನುಮಂತ ಭೀಮಣ್ಣ ದೊರೆ ಬಾಲಯ್ಯ ನಾಯಕ ಕರೆಗುಡ್ಡ ಇನ್ನು ಹಲವಾರು ಸಮುದಾಯದ ಮುಖಂಡರು ಉಪಸ್ಥಿತಿ ಇದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button