ವಿದ್ಯಾರ್ಥಿಗಳು ವಿನಯ, ವಿಧೇಯತೆ ಮತ್ತು ದಾನ ಶೀಲತೆಯನ್ನು ರೂಢಿಸಿ ಕೊಳ್ಳಬೇಕು – ಪೂಜ್ಯ ವೈ.ರಾಜಾರಾಮ್ ಗುರುಗಳು ಕಿವಿಮಾತು.

ಚಳ್ಳಕೆರೆ ಜು.15

ಮಧ್ಯಾಹ್ನದ ವಿಶೇಷ ಅನ್ನಪ್ರಸಾದ ವಿನಿಯೋಗ

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿನಯ, ವಿಧೇಯತೆ ಮತ್ತು ದಾನ ಶೀಲತೆಯಂತಹ ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಂಡು ಸಾಧಕರಾಗಿ ಹೊರ ಹೊಮ್ಮಬೇಕು ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ.ರಾಜಾರಾಮ್ ಗುರುಗಳು ಅಭಿಪ್ರಾಯ ಪಟ್ಟರು.

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಆವರಣದಲ್ಲಿ ಶ್ರೀನರಹರಿ ಸೇವಾ ಪ್ರತಿಷ್ಠಾನದಿಂದ “ಬ್ರಹ್ಮಶ್ರೀ ಸಿಂಹಾದ್ರಿ ಸದ್ಗುರುಗಳ 106ನೇ ವರ್ಷ”ದ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ.

2025-2026 ನೇ. ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ‌.ಯು.ಸಿ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ‌ ಚಳ್ಳಕೆರೆ ನಗರ ಹಾಗೂ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 93 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗರಂಗೆರೆ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಯವರಿಗೆ ಗೌರವ ಧನ ನೀಡಿ ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಶಿಕ್ಷಕ ಮತ್ತು ನರಹರಿ ಆಶ್ರಮದ ಸದ್ಭಕ್ತರಾದ ಮಲ್ಲಿಕಾರ್ಜುನಪ್ಪ ಅವರು ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ನಿರೂಪಿಸಿ ಸಿಂಹಾದ್ರಿ ಸದ್ಗುರುಗಳ ಜೀವನ ಮತ್ತು ಸಾಧನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕುಮಾರಿ ಐಶ್ವರ್ಯ ಅವರಿಂದ ಪ್ರಾರ್ಥನೆ

ಕಾರ್ಯಕ್ರಮದ ಆರಂಭದಲ್ಲಿ ಮುತ್ತುರಾಜ್ ಅವರಿಂದ ಸೊಗಸಾದ ಗಾಯನ ನಡೆಯಿತು.

ಮುತ್ತುರಾಜ್ ಅವರಿಂದ ಸೊಗಸಾದ ಗಾಯನ

ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿ ಎನ್ ಪದ್ಮನಾಭ, ಬಿ.ಸಿ ಸಂಜೀವಮೂರ್ತಿ, ರವಿ, ರಾಜೇಶ್ವರಿ ರಾಜಾರಾಮ್, ಲಂಕೇಶಪ್ಪ, ಧನಂಜಯ, ಯತೀಶ್ ಎಂ ಸಿದ್ದಾಪುರ, ಐಶ್ವರ್ಯ, ಹಂಸಿನಿ, ಸುಹಾಸ್, ನೇತ್ರಾ,ದವನ, ವಿದ್ಯಾ, ಬಿಂದುಶ್ರೀ, ಸ್ಕಂದನ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button