ಪವಾಡ ಬಸವೇಶ್ವರ ಬೆಳ್ಳಿ ಕವಚ ಕಳ್ಳತನ ಪ್ರಕರಣ ಎಣಿಕೆಯಲ್ಲಿ ಮಹತ್ವದ ಸುಳಿವು ಲಭ್ಯ – ಐಜಿಪಿ ಸಂದೀಪ್ ಪಾಟೀಲ್.
ಬಸರಕೋಡ ಜು.15

ಮುದ್ದೇಬಿಹಾಳ ತಾಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಕವಚ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿ ಪ್ರಕರಣಗಳನ್ನು ಬೇದಿ ಸಲಾಗುವುದು, ಎಂದು ಬೆಳಗಾವಿ ಉತ್ತರ ವಲಯ ಐ.ಜಿ.ಪಿ ಸಂದೀಪ್ ಪಾಟೀಲ್ ಹೇಳಿದರು.
ತಾಲೂಕಿನ ಬಸರಕೊಡ ಗ್ರಾಮದ ಐತಿಹಾಸಿಕ ಶ್ರೀ ಪವಾಡ ಬಸವೇಶ್ವರ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ಅವರು ದೇವಸ್ಥಾನದ ಕರ್ತೃ ಗದ್ದುಗೆ ಮೇಲಿನ 32 ಕೆ.ಜಿ ಬೆಳ್ಳಿಯ ಕವಚ ಕಳ್ಳತನ ಪ್ರಕರಣ ದ ಕುರಿತು ವಿಜಯಪುರ ಎಸ್ಪಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆದು ಕೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಂಡಗಳನ್ನು ರಚನೆ ಮಾಡಿದ್ದು ಪ್ರಕರಣದಲ್ಲಿ ಕಳ್ಳರ ಬಗ್ಗೆ ಮಹತ್ವದ ಮಾಹಿತಿ ದೊರಕಿದೆ, ಶೀಘ್ರದಲ್ಲಿ ಕಳ್ಳರನ್ನು ಪತ್ತೆ ಮಾಡಲಾಗುವುದು, ಎಂದು ತಿಳಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಕಮಿಟಿ ಅಧ್ಯಕ್ಷ ಕೆ, ವೈ,ಬಿರಾದಾರ ನಿರ್ದೇಶಕ ಶ್ರೀಶೈಲ್ ಮೇಟಿ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ, ಸಿಪಿಐ ಮಮ್ಮದ್ ಪಸಿವುದ್ದೀನ್, ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ, ಅಪರಾಧ ವಿಭಾಗದ ಪಿ ಎಸ್ ಐ ಆರ್ ಎಸ್ ಬಂಗಿ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಎಸ್ ಎಸ್ ಹಂಡರಗಲ, ಬಿ,ಎಸ್ ಬೈಲಗೊಂಡ, ಮುಖಂಡ ಅಪ್ಪು ಧಣಿ ನಾಡಗೌಡ್ರ, ವೀರೇಶ್ ಮಂಕಣಿ, ಮೊದಲಾದವರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

